ಮೈಸೂರು: ಕೇಕ್ ಕಟ್ ಮಾಡಲು ಸಿದ್ದರಾಮಯ್ಯನವರಿಗೆ ಚಾಕುವಿನ ಅಗತ್ಯವಿಲ್ಲ, ಬೆರಳು ಸಾಕು!
ಚಾಕು ಇಲ್ಲದ ಕಾರಣ ವಿರೋಧ ಪಕ್ಷದ ನಾಯಕ ಬೆರಳಲ್ಲೇ ಕೇಕ್ ಕಟ್ ಮಾಡಿದ ಬಳಿಕ ಸ್ವಾಮೀಜಿಗಳನ್ನು ಒಂದು ತುಂಡನ್ನು ಅವರಿಗೆ ತಿನ್ನಿಸಿದರು.
ಮೈಸೂರು: ಬೃಹತ್ ಗಾತ್ರದ ಕೇಕ್ ಆದರೆ ಅದನ್ನು ಕತ್ತರಿಸಲು ಚಾಕು (Knife) ತರಲು ಮರೆತ ಬೆಂಬಲಿಗರು ಮತ್ತು ಕುರುಬ ಸಮುದಾಯದ (Kuruba community) ಜನ! ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ತಮ್ಮ 75 ನೇ ಜನ್ಮದಿನ ಆಚರಿಸಿಕೊಂಡು ಮೂರ್ನಾಲ್ಕು ತಿಂಗಳಾಯಿತು. ಆದರೆ ಮೈಸೂರಿನ ಕುರುಬ ಸಮುದಾಯ ಮಠದಲ್ಲಿ ಅದನ್ನು ಬುಧವಾರ ಸೆಲಿಬ್ರೇಟ್ ಮಾಡಲಾಯಿತು. ಕೇಕ್ ಮೇಲೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತ ಬರೆದಿದ್ದು ವಿಶೇಷ ಮಾರಾಯ್ರೇ. ಚಾಕು ಇಲ್ಲದ ಕಾರಣ ವಿರೋಧ ಪಕ್ಷದ ನಾಯಕ ಬೆರಳಲ್ಲೇ ಕೇಕ್ ಕಟ್ ಮಾಡಿದ ಬಳಿಕ ಸ್ವಾಮೀಜಿಗಳನ್ನು ಒಂದು ತುಂಡನ್ನು ಅವರಿಗೆ ತಿನ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos