ರಸ್ತೆ ಪಕ್ಕ ತಮಗಾಗಿ ಕಾಯುತ್ತಾ ನಿಂತಿದ್ದ ಗ್ರಾಮಸ್ಥರೊಂದಿಗೆ ಕಾರಿಂದಿಳಿದು ಮಾತಾಡಿದ ಸಿದ್ದರಾಮಯ್ಯ

|

Updated on: Aug 21, 2024 | 8:04 PM

ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಂಚ ಗೆಲುವಾಗಿದ್ದಾರೆ. ಅವರ ಪರ ವಾದಿಸಲು ಭಾರತದ ಖ್ಯಾತ ವಕೀಲರಲ್ಲಿ ಒಬ್ಬರಾಗಿರುವ ಡಾ ಅಭಿಷೇಕ್ ಮನು ಸಿಂಘ್ವಿ ಆಗಮಿಸಿದ್ದರು. ಮುಡಾ ಪ್ರಕರಣದ ದೂರುಗಳನ್ನು ಆಗಸ್ಟ್ 29ರವರೆಗೆ ವಿಚಾರಣೆ ನಡೆಸದಂತೆ ಹೈಕೋರ್ಟ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.

ಬಾಗಲಕೋಟೆ: ಹಗರಣಗಳ ವಿಷಯ ಏನೇ ಇರಲಿ ಮತ್ತು ಅವುಗಳ ಔಟ್ ಕಮ್ ಏನೇ ಆಗಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರು ಮತ್ತು ಮಾಸ್ ಲೀಡರ್ ಅನ್ನೋದರಲ್ಲಿ ಎರಡು ಮಾತಿಲ್ಲ. ಇಂದು ಅವರು ಆಲಮಟ್ಟಿಗೆ ಹೋಗುವಾಗ ಹೆದ್ದಾರಿ ಪಕ್ಕದ ಗ್ರಾಮಸ್ಥರು ಅವರು ಹಾದು ಹೋಗುವ ಸಮಯಕ್ಕಾಗಿ ಕಾದುಕೊಂಡು ನಿಂತಿದ್ದರು. ತಮ್ಮನ್ನು ನೋಡಿ ಅವರು ಕಾರಿಂದ ಇಳಿದು ಬಂದಾರೆಂದು ಪ್ರಾಯಶಃ ಜನ ಭಾವಿಸಿರಲಿಲ್ಲ. ಆದರೆ ಸಿದ್ದರಾಮಯ್ಯ ಕಾರು ನಿಲ್ಲಿಸಿ ಅವರಲ್ಲಿಗೆ ಬರುತ್ತಾರೆ ಮತ್ತು ಅವರು ಹೇಳುವ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ. ಸಿಎಂ ಕಾರಿಂದ ಇಳಿದಾಕ್ಷಣ ಅಂಗರಕ್ಷಕರು ಅವರಲ್ಲಿಗೆ ಏನಾಯ್ತೋ ಅಂದುಕೊಂಡು ಧಾವಿಸಿ ಬರೋದನ್ನು ಗಮನಿಸಿ. ಓಕೆ, ಅವರ ಕೆಲಸವೇ ಅದು ಬಿಡಿ. ಗ್ರಾಮಸ್ಥರಲ್ಲಿ ಒಬ್ಬರು ಕಾಗದದಲ್ಲಿ ಬರೆದುಕೊಂಡು ಬಂದಿದ್ದನ್ನು ಓದುತ್ತಾರೆ. ಅದು ಮನವಿ ಪತ್ರವೋ ಅಥವಾ ಸಿದ್ದರಾಮಯ್ಯ ಗುಣಗಾನ ಮಾಡುತ್ತಾ ಬರೆದ ಪದ್ಯ ಅಥವಾ ಗದ್ಯವೋ ಅಂತ ಅರ್ಥವಾಗಲಿಲ್ಲ. ಈ ಗ್ರಾಮ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರತಿನಿಧಿಸುವ ಹುನುಗುಂದ ಕ್ಷೇತ್ರದ ಭಾಗವಾಗಿರಬಹುದು. ಅವರು ಜನರನ್ನು ಸಿಎಂಗೆ ಪರಿಚಯಿಸುತ್ತಿರುವುದನ್ನು ಗಮನಿಸಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕುಮಾರಸ್ವಾಮಿಯನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬೇಕಿಲ್ಲ ಒಬ್ಬ ಕಾನ್​ಸ್ಟೇಬಲ್ ಸಾಕು: ಸಿದ್ದರಾಮಯ್ಯ

Follow us on