ಬೆಳಗಾವಿ: ಹೆಲಿಪ್ಯಾಡ್ನಿಂದ ನ್ಯೂ ಸರ್ಕ್ಯೂಟ್ ಹೌಸ್ಗೆ ಒಂದೇ ಕಾರಲ್ಲಿ ಆಗಮಿಸಿದ ಸಿದ್ದರಾಮಯ್ಯ, ಶಿವಕುಮಾರ್
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಗಾಲದ ಅಧಿವೇಶನ ನಿಮಿತ್ತ ನ್ಯೂ ಸರ್ಕ್ಯೂಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಧಿವೇಶನದ ಎರಡನೇ ವಾರದ ಕಾರ್ಯಕಲಾಪಗಳು ಇಂದಿನಿಂದ ಶುರುವಾಗಲಿವೆ. ವಕ್ಫ್ ಭೂವಿವಾದ ಸದನದಲ್ಲಿ ಚರ್ಚೆಯಾಗುತ್ತಿದೆ. ವಿರೋಧ ಪಕ್ಷದ ನಾಯಕರು ಅಡಳಿತ ಪಕ್ಷದ ಮಂತ್ರಿಳನ್ನು ಬ್ಯಾಕ್ಫುಟ್ಗೆ ತಳ್ಳುವಲ್ಲಿ ಸಫಲರಾಗಿದ್ದಾರೆ.
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಸಾರ್ವಜನಿಕವಾಗಿ ಯಾವತ್ತೂ ತೋರ್ಪಡಿಸಲ್ಲ. ಅವರ ಈ ಗುಣವನ್ನು ವಿರೋಧಿಗಳು ಸಹ ಪ್ರಶಂಸಿಸುತ್ತಾರೆ. ನಿನ್ನೆ ರಾತ್ರಿ ಅವರಿಬ್ಬರೂ ಗದಗ ಜಿಲ್ಲೆಯ ರೋಣದಿಂದ ಹೆಲಿಕಾಪ್ಟರ್ ಒಂದರಲ್ಲಿ ಬೆಳಗಾವಿಗೆ ಆಗಮಿಸಿದರು. ಸುವರ್ಣ ಸೌಧದ ಹೆಲಿಪ್ಯಾಡ್ ನಿಂದ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಕಾನೂನು ಸಚಿವ ಹೆಚ್ ಕೆ ಪಾಟೀಲ್ ಒಂದೇ ಕಾರಲ್ಲಿ ನಗರದ ನ್ಯೂ ಸರ್ಕ್ಯೂಟ್ ಹೌಸ್ಗೆ ಆಗಮಿಸುತ್ತಿರುವುದನ್ನು ಇಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದ: ವಿಜಯೇಂದ್ರ ವಿರುದ್ಧದ ಆರೋಪಕ್ಕೆ ಟ್ವಿಸ್ಟ್, ಸುಳ್ಳು ಹೇಳಿದ್ರಾ ಸಿದ್ದರಾಮಯ್ಯ..?