ವಕ್ಫ್ ಆಸ್ತಿ ವಿವಾದ: ವಿಜಯೇಂದ್ರ ವಿರುದ್ಧದ ಆರೋಪಕ್ಕೆ ಟ್ವಿಸ್ಟ್, ಸುಳ್ಳು ಹೇಳಿದ್ರಾ ಸಿದ್ದರಾಮಯ್ಯ..?

ವಕ್ಫ್​ ಆಸ್ತಿ ಕಬಳಿಕೆ ಬಗ್ಗೆ ಮೌನವಾಗಿರಲು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ‌ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ​ಗೆ 150 ಕೋಟಿ ರೂ. ಆಮಿಷವೊಡ್ಡಿದ ಆರೋಪ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಕೇಳಿಬಂದಿದ್ದು, ಈ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ಖುದ್ದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಆದ್ರೆ, ಇದೀಗ ಆರೋಪಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ವಿಜಯೇಂದ್ರ ವಿರುದ್ಧ ವಕ್ಫ್​ ಆಸ್ತಿ ಕಬಳಿಕೆ ಆರೋಪ ಮಾಡುತ್ತಿದ್ದ ಕಾಂಗ್ರೆಸ್​ಗೆ ಇದೀಗ ತಿರುಗುಬಾಣವಾಗುವ ಲಕ್ಷಣಗಳ ಕಾಣಿಸುತ್ತಿವೆ.

ವಕ್ಫ್ ಆಸ್ತಿ ವಿವಾದ: ವಿಜಯೇಂದ್ರ ವಿರುದ್ಧದ ಆರೋಪಕ್ಕೆ ಟ್ವಿಸ್ಟ್, ಸುಳ್ಳು ಹೇಳಿದ್ರಾ ಸಿದ್ದರಾಮಯ್ಯ..?
ಸಿದ್ದರಾಮಯ್ಯ, ವಿಜಯೇಂದ್ರ
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ರಮೇಶ್ ಬಿ. ಜವಳಗೇರಾ

Updated on: Dec 15, 2024 | 11:51 AM

ಮಂಗಳೂರು, (ಡಿಸೆಂಬರ್ 15): ವಕ್ಫ್​ ಆಸ್ತಿ ಕಬಳಿಕೆ ಬಗ್ಗೆ ಬಿವೈ ವಿಜಯೇಂದ್ರ ಅವರು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ‌ ಅಧ್ಯಕ್ಷ ಅನ್ವರ್​ ಮಾಣಿಪ್ಪಾಡಿಗೆ 150 ಕೋಟಿ ರೂ. ಆಮಿಷವೊಡ್ಡಿದ ಆರೋಪಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ವಿಜಯೇಂದ್ರ 150 ಕೋಟಿ ರೂಪಾಯಿ ಆಮಿಷವೊಡ್ಡಿರುವ ಬಗ್ಗೆ ಎಂದು ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿರುವುದು ಬಯಲಾಗಿದ್ದು, ಈ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದರು. ಆದರೆ, ಈ ಆರೋಪಕ್ಕೆ ಸಂಬಂಧಿಸಿದಂತೆ ಸ್ವತಃ ಮಾಣಿಪ್ಪಾಡಿ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಸಿಎಂ ಸಿದ್ದರಾಮಯ್ಯ ಹೇಳಿರುವುದು 90 ಪ್ರತಿಶಕ ಸುಳ್ಳು. ಕಾಂಗ್ರೆಸ್​ನವರೇ ಲಂಚದ ಆಮಿಷವೊಡಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಹಾಗಾದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಜಯೇಂದ್ರ ಮೇಲೆ ಸುಳ್ಳು ಆರೋಪ ಮಾಡಿದರೆ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಬಿಜೆಪಿಯಿಂದ ಯಾವುದೇ ಲಂಚದ ಅಮಿಷ ಬಂದಿಲ್ಲ

ಈ ಬಗ್ಗೆ ಟಿವಿ9ನೊಂದಿಗೆ ಮಾತನಾಡಿರುವ ಕ್ಕೆ ಅನ್ವರ್ ಮಾಣಿಪ್ಪಾಡಿ , ಬಿ.ವೈ.ವಿಜಯೇಂದ್ರ ನನಗೆ ಯಾವುದೇ ಲಂಚದ ಅಮಿಷವೊಡ್ಡಿಲ್ಲ. 2012-13ರಲ್ಲಿ ವಿಜಯೇಂದ್ರ ಯಾರು ಅಂತಾನೆ ನನಗೆ ಗೊತ್ತಿರಲಿಲ್ಲ. ಅಂದು ಕಾಂಗ್ರೆಸ್​ನ ಸಾಕಷ್ಟು ಜನರು ಲಂಚದ ಅಮಿಷವೊಡ್ಡಿದ್ದರು. ವರದಿ ಜಾರಿ ಮಾಡುವ ಸಲುವಾಗಿ ಬಿಜೆಪಿ ವಿರುದ್ಧ ಚಾಟಿಬೀಸಿದ್ದು ನಿಜ/ ಪ್ರಧಾನಮಂತ್ರಿಗೆ ಪತ್ರ ಬರೆದು ಸಿಬಿಐ ತನಿಖೆಗೆ ಒತ್ತಾಯ ಮಾಡಿದ್ದೆ. ಆದ್ರೆ ಬಿಜೆಪಿಯಿಂದ ನನಗೆ ಯಾವುದೇ ಲಂಚದ ಅಮಿಷ ಬಂದಿಲ್ಲ. ವರದಿ ಅನುಸಾರ ಸಿಬಿಐಗೆ ಕೊಟ್ಟರೆ ಕಾಂಗ್ರೆಸ್ಸಿಗರ ಬುಡಕ್ಕೆ ಬರುತ್ತೆ. ಹೀಗಾಗಿ ಈ ವಿಚಾರವಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಿಎಂ, ಪ್ರಿಯಾಂಕ್​ ಖರ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ತಾಕತ್ತಿದ್ದರೆ ನಿಮ್ಮ ವಿರುದ್ಧದ ಮುಡಾ ಹಗರಣದ ಸಿಬಿಐ ತನಿಖೆಗೆ ಸಹಕರಿಸಿ; ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಸವಾಲು

ಸಿಎಂ ಸಿದ್ದರಾಮಯ್ಯ 90 ಪ್ರತಿಶಕ ಸುಳ್ಳು . ಪ್ರಕರಣವನ್ನು CBIಗೆ ನೀಡುವಂತೆ ಸಿಎಂ ಹೇಳಿದ್ದಾರೆ. ಕೊಡಲಿ. 1.60 ಸಾವಿರ ವಕ್ಪ್​​​ಗೆ ಆಸ್ತಿ ಎಂದು ನೋಟಿಸ್ ಕೊಟ್ಟಿದ್ರು ವಕ್ಪ್​​​ಗೆ ಬೋರ್ಡ್​ ಆಸ್ತಿ ಇರುವುದು 54 ಸಾವಿರ ಹೆಕ್ಟರ್​. 27ರಿಂದ 28 ಸಾವಿರ ಹೆಕ್ಟರ್​ ಜಮೀನು ಕಬಳಿಕೆ ಆಗಿದೆ. 1.50 ಸಾವಿರ ಹೆಕ್ಟರ್​ ಜಮೀನು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ನಾನು‌ ಅಧಿಕಾರ ಸ್ವೀಕರಿಸಿದ ಸಂದರ್ಭ ಅದರ ಸಬ್ ರಿಜಿಸ್ಟರ್ ವ್ಯಾಲ್ಯೂ 2 ಲಕ್ಷದ 30 ಸಾವಿರ ಕೋಟಿ ಆಗಿತ್ತು. ಹೀಗಿರುವಾಗ ಸಿದ್ದರಾಮಯ್ಯ ಸರ್ಕಾರ ಕೇವಲ ರೈತರ ಆಸ್ತಿಗಳಿಗೆ ಮಾತ್ರ ಹೇಗೆ ನೋಟೀಸ್ ಕೊಟ್ಟರು. ಇದು ಸತ್ಯ ಆಗಿದ್ರೆ ಹೇಗೆ ವಾಪಾಸು ಪಡೆದುಕೊಂಡರು. ಇದು ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಒಬ್ಬರಿಗೊಬ್ಬರು ಹೊಡೆದುಕೊಳ್ಳುವಂತೆ ಮಾಡಿದ್ದಲ್ವಾ? ನಾನು ನೀಡಿದ ವರದಿ ಹೈಕೋರ್ಟ್, ಸುಪ್ರೀಂ ಕೋರ್ಟ್, ಲೋಕಾಯುಕ್ತದಲ್ಲಿ ಗೆದ್ದಿದೆ/ ವರದಿಯನ್ನು ಮೊದಲು ತನಿಖೆಗೆ ತೆಗೆದುಕೊಂಡು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ ಎಂದರು ಹೇಳಿದರು.

ವಕ್ಫ್ ಆಸ್ರಿ ಕಬಳಿಸಿದ್ರಾ ಕಾಂಗ್ರೆಸ್ ನಾಯಕರು?

ನನ್ನ ವರದಿಯ ಬಗ್ಗೆ ತನಿಖೆ ಮಾಡಿದ್ರೆ ಬಹಳಷ್ಟು ಜನ ಜೈಲಿಗೆ ಹೋಗುತ್ತಾರೆ. ಅಲ್ಪಸಂಖ್ಯಾತರ ಬಗ್ಗೆ ಸಿದ್ದರಾಮಯ್ಯನವರಿಗೆ ಅಷ್ಟೊಂದು ಪ್ರೀತಿ ಇದ್ರೆ ನನ್ನ ವರದಿಯ ಬಗ್ಗೆ ಕ್ರಮ ತೆಗೆದುಕೊಳ್ಳಲಿ. ಎನ್.ಎ ಹ್ಯಾರಿಸ್ ಸಹ ಇದರಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರು ಏರ್​ಪೋರ್ಟ್​ ರಸ್ತೆಯಲ್ಲಿನ 24 ಎಕರೆ ಭೂಮಿ ತನ್ನದಾಗಿಸಿಕೊಂಡಿದ್ದಾರೆ/. ತನ್ನ ಹೆಂಡತಿ ಮತ್ತು ತಾಯಿಯ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಹ್ಯಾರಿಸ್ ವಿರುದ್ಧ ಗಂಭೀರ ಆರೋಪ ಮಾಡಿದರು.

ರೆಹಮಾನ್ ಖಾನ್ ತನ್ನ ಅಧಿಕಾರ ಬಳಸಿಕೊಂಡು ದೊಡ್ಡ ಆಸ್ತಿಗಳನ್ನು ಯಾರು ಯಾರಿಗೂ ಕೊಟ್ಟಿದ್ದಾರೆ. ವರದಿ ಇಟ್ಟುಕೊಂಡು ತನಿಖೆ ಮಾಡಿದ್ರೆ ರೈತರ ಆಸ್ತಿ ಎಷ್ಟು ವಕ್ಫ್ ಆಸ್ತಿ ಎಷ್ಟೆಂದು ಗೊತ್ತಾಗುತ್ತೆ. ಹೀಗಾದ್ರೆ ಯಾವ ಹೋರಾಟವೂ ಅಗತ್ಯವಿಲ್ಲ. ಹಣ ಬಲ, ತೋಲ್ಬಳದಿಂದ ಈ ವರದಿಯ ಬಗ್ಗೆ ಯಾರು ತಲೆಕೆಡಿಸಿಕೊಂಡಿಲ್ಲ. ಬಿಜೆಪಿಗೆ ಈಗ ಬೇರೆ ದಾರಿಯಿಲ್ಲದೇ ಹೋರಾಟ ಮಾಡ್ತಿದೆ. ಹೋರಾಟ ಮಾಡದಿದ್ದರೆ ಜನ ತಪ್ಪು ತಿಳಿದುಕೊಳ್ಳುತ್ತಿದ್ದಾರೆಂದು ಹೋರಾಟ ಮಾಡ್ತಿದೆ. ಇವತ್ತಲ್ಲ ನಾಳೆ ಇದೆಲ್ಲವೂ ಹೊರಗಡೆ ಬರುತ್ತೆ. ಕಳ್ಳರು ಒಂದಿನ ಒಳಗಡೆ ಹೋಗುತ್ತಾರೆ ಎಂದರು.

ಈ ವರದಿ ಬಗ್ಗೆ ತನಿಖೆಗೆ ಜಾರಿಗೆ ಪ್ರಧಾನಿಯವರನ್ನು ಸಹ ಭೇಟಿ ಮಾಡಿದ್ದೇನೆ. ಆದಷ್ಟು ಶೀಘ್ರವಾಗಿ ಈ ಬಗ್ಗೆ ಗಮನ ಹರಿಸೋದಾಗಿ ಹೇಳಿದ್ದಾರೆ. ಈ ವರದಿ ನೋಡಿದ ಬಳಿಕ‌ ಕೇಂದ್ರ ಸರ್ಕಾರವೂ ಕಣ್ತೆರೆದಿದೆ. ನನ್ನ ವರದಿಯಲ್ಲಿ 10 ಸಾವಿರ ಪುಟಗಳ ಸಾಕ್ಷಿಗಳ ದಾಖಲೆಗಳನ್ನು ಸಹ ಒದಗಿಸಿದ್ದೇನೆ. ಸಿದ್ದರಾಮಯ್ಯನವರು ಅವರದ್ದೇ ದಾರಿಯಲ್ಲಿ ಹೋಗ್ತಿದ್ದಾರೆ. ಪ್ರಾಯಶಃ ಅವರು ಭೂಮಿ‌ ಮೇಲೆ ನಡೆಯುತ್ತಿಲ್ಲ. ಎಲ್ಲೋ ಮೇಲೆ ಹಾರಾಡುತ್ತಿದ್ದಾರೆ, ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಬೇಡದ ಕೆಲಸ ಮಾಡುತ್ತಿದ್ದಾರೆ. ಬಹಳಷ್ಟು ಸಲ‌ ಹೇಳಿದ್ದೇನೆ ಅವರು ಅರ್ಥ ಮಾಡಿಕೊಳ್ಳಬೇಕು. ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ರೆ ನನ್ನ ವರದಿಯನ್ನು ಸಿಬಿಐಗೆ ಕೊಟ್ಟು ಸಂಪೂರ್ಣವಾಗಿ ತನಿಖೆ ಮಾಡಿಸಿ. ಆಗ ಹಾಲಿಗೆ ಹಾಲು ನೀರಿಗೆ ನೀರು ಬೇರೆಯಾಗುತ್ತೆ. ರೈತರ ಭೂಮಿ ಯಾವುದು, ವಕ್ಫ್ ಆಸ್ತಿ ಯಾವುದೆಂದು ಗೊತ್ತಾಗುತ್ತೆ ಎಂದು ತಿಳಿಸಿದರು.

ಅನ್ವರ್ ಮಾಣಿಪ್ಪಾಡಿಯವರ ಈ ಸ್ಪಷ್ಟನೆ ಹಾಗು ಕಾಂಗ್ರೆಸ್​ ನಾಯಕರ ಮೇಲಿನ ಆರೋಪ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇನ್ನು ವಿಜಯೇಂದ್ರ ವಿರುದ್ಧ ವಕ್ಫ್​ ಆಸ್ತಿ ಕಬಳಿಕೆ ಆರೋಪ ಮಾಡುತ್ತಿದ್ದ ಕಾಂಗ್ರೆಸ್​ಗೆ ಇದು ತಿರುಗುಬಾಣವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ