- Kannada News Photo gallery Waste to Resource: Karnataka Government Recycled Gifts to PM Narendra Modi, Kannada News
ಕರ್ನಾಟಕ ಸರ್ಕಾರದಿಂದ ಪ್ರಧಾನಿ ಮೋದಿಗೆ ವಿಶೇಷ ಗಿಫ್ಟ್! ಫೋಟೋಸ್ ನೋಡಿ
ಸ್ವಚ್ಛ ಭಾರತ ಅಭಿಯಾನದ 10ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರು "ಕಸದಿಂದ ರಸ" ಯೋಜನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕರ್ನಾಟಕ ಸರ್ಕಾರವು ಘನ ತ್ಯಾಜ್ಯಗಳಿಂದ ತಯಾರಿಸಿದ ವಿಶೇಷ ಉಡುಗೊರೆಯನ್ನು ಪ್ರಧಾನಿಗಳಿಗೆ ನೀಡಿದೆ. ಈ ಉಡುಗೊರೆ ಪ್ಲಾಸ್ಟಿಕ್, ಟೈರ್, ಬಟ್ಟೆ ಮತ್ತು ಪತ್ರಿಕೆಗಳ ಮರುಬಳಕೆಯಿಂದ ತಯಾರಿಸಲಾಗಿದೆ . ಇದು "ಕಸದಿಂದ ರಸ" ಯೋಜನೆಯ ಯಶಸ್ಸಿನ ಸಾಕ್ಷಿಯಾಗಲಿದೆ.
Updated on: Dec 15, 2024 | 12:22 PM

ಸ್ವಚ್ಛ ಭಾರತ ಅಭಿಯಾನ ಪ್ರಾರಂಭವಾಗಿ 10 ವರ್ಷವಾಯಿತು. ಮಹಾತ್ಮ ಗಾಂಧಿಜಿಯವರ 150ನೇ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತವು ಮಹಾತ್ಮ ಗಾಂಧಿಜಿಗೆ ಸಲ್ಲಿಸಬಹುದಾದ ಅತ್ಯುತ್ತಮ ಗೌರವವೆಂದರೆ ಸ್ವಚ್ಛ ಭಾರತ ಎಂದು ಹೇಳಿದ್ದರು. ಸ್ವಚ್ಛ ಭಾರತ ಅಭಿಯಾನದ ಮುಂದಿನ ಹೆಜ್ಜೆಯೇ "ಕಸದಿಂದ ರಸ". ಅಮೃತ್ ಯೋಜನೆಯಲ್ಲಿ ಕಸದಿಂದ ರಸ ಒಂದು ಭಾಗವಾಗಿದೆ.

Waste Management Recycle (ಕಸದಿಂದ ರಸ) ಬಗ್ಗೆ ಹೆಚ್ಚು ಒತ್ತು ನೀಡುತ್ತಿರುವ ಪ್ರಧಾನಿ ಮೋದಿಯವರು ಈ ವಿಚಾರವಾಗಿ ಚರ್ಚಿಸಲು ದೇಶದ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಸಭೆ ಕರೆದಿದ್ದಾರೆ. ಈ ಸಂಬಂಧ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯರ್ಶಿ ಶಾಲಿನಿ ರಜನೀಶ್ ಅವರು ರವಿವಾರ (ಡಿ.15) ದೆಹಲಿಗೆ ತೆರಳಿದ್ದಾರೆ.

ಈ ಹಿನ್ನೆಲೆಯಲ್ಲಿ ಘನ ತ್ಯಾಜ್ಯಗಳಿಂದ ತಯಾರಿಸಲಾಗಿರುವ ವಸ್ತುಗಳನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಲು ಕರ್ನಾಟಕ ಸರ್ಕಾರ ಸುಂದರವಾದ ಗಿಫ್ಟ್ ತಯಾರಿಸಿದೆ. ತಿನಿಸುಗಳ ಪ್ಲಾಸ್ಟಿಕ್ ಕವರ್ಗಳಿಂದ ಎಂಎಲ್ಪಿ ಕೋಸ್ಟರ್ ಮತ್ತು ಪಿನ್ ತಯಾರಿಸಲಾಗಿದೆ.

ಹಾಗೇ ಟೈಯರ್ನಿಂದ ಐಪ್ಯಾಡ್ ಬ್ಯಾಗ್, ವೆಸ್ಟೇಜ್ ಬಟ್ಟೆಗಳಿಂದ ವ್ಯಾಲೆಟ್ ಸಿದ್ದಪಡಿಸಲಾಗಿದೆ. ಕಾಟನ್ ಬಟ್ಟೆಯಿಂದ ನೋಟ್ ಪ್ಯಾಡ್, ಟೆಕ್ಸ್ಟೈಲ್ಸ್ ವೇಸ್ಟೇಜ್ನಿಂದ ಲ್ಯಾಪ್ ಟಾಪ್ ಕವರ್ ಮತ್ತು ನ್ಯೂಸ್ ಪೇಪರ್ನಿಂದ ಗಿಫ್ಟ್ ಪ್ಯಾಕೇಜ್ ತಯಾರು ಮಾಡಲಾಗಿದೆ.

ಸಭೆಯಲ್ಲಿ ಭಾಗಿಯಾಗಲು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯರ್ಶಿ ಶಾಲಿನಿ ರಜನೀಶ್ ಅವರು ರವಿವಾರ (ಡಿ.15) ದೆಹಲಿಗೆ ತೆರಳಿದ್ದು, ಪ್ರಧಾನಿ ಮೋದಿಯವರಿಗೆ ಘನ ತ್ಯಾಜ್ಯದಿಂದ ಕಸದಿಂದ ತಯಾರಿಸಲಾಗಿರುವ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.



















