Kannada News Photo gallery shilpa shetty and kundra couple donates robotic elephant Chikkamagalur to rambhapuri mutt News In kannada
ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಡುಗೆ ನೀಡಿದೆ ಶಿಲ್ಪಾ ಶೆಟ್ಟಿ, ಹೇಗಿದೆ ನೋಡಿ
ಚಿಕ್ಕಮಗಳೂರು (ಡಿ.15): ಬಾಲಿವುಡ್ ಸ್ಟಾರ್ ದಂಪತಿ ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರು ಚಿಕ್ಕಮಗಳೂರು ಜಿಲ್ಲೆಯ ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆಯೊಂದನ್ನು ಕೊಡುಗೆಯಾಗಿ ನೀಡಿದ್ದಾರೆ. ದೇಶದ ಪಂಚಪೀಠಗಳಲ್ಲೇ ಮೊದಲ ಪೀಠವಾದ ರಂಭಾಪುರಿ ಮಠವು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿದೆ. ಈ ಮಠದ ಭಕ್ತರಾಗಿರುವ ಬಾಲವುಡ್ ನಟಿ ಶಿಲ್ಪಾ ಶೆಟ್ಟಿ ದಂಪತಿ ಆಗಾಗ ಮಠಕ್ಕೆ ಬಂದು ಹೋಗುತ್ತಾರೆ. ಇದೀಗ ಒಂದು ಸಂಕಲ್ಪವನ್ನು ಮಾಡಿಕೊಂಡು ಮಠಕ್ಕೆ ರೋಬೋಟಿಕ್ ಆನೆಯನ್ನು ಕೊಟ್ಟಿದ್ದಾರೆ. ಈ ರೋಬೋಟಿಕ್ ಆನೆ ಹೇಗಿದೆ ಎನ್ನುವುದನ್ನು ಚಿತ್ರಗಳಲ್ಲಿ ನೋಡಿ.
ಬಾಲಿವುಡ್ ಸ್ಟಾರ್ ದಂಪತಿ ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರು ಚಿಕ್ಕಮಗಳೂರು ಜಿಲ್ಲೆಯ NR ಪುರ ತಾಲೂಕಿನ ರಂಭಾಪುರಿ ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಡುಗೆಯನ್ನು ಕೊಟ್ಟಿದ್ದಾರೆ.
1 / 7
ದೇಶದ ಪಂಚಪೀಠಗಳಲ್ಲೇ ಮೊದಲ ಪೀಠವಾದ ರಂಭಾಪುರಿ ಮಠವು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಮಠಕ್ಕೆ ರೋಬೋಟಿಕ್ ಆನೆ ಬಂದಿದ್ದು, ಇದನ್ನು ಇಂದು(ಡಿಸೆಂಬರ್ 15) ರಂಭಾಪುರಿ ಶ್ರೀ ಡಾ: ವೀರ ಸೋಮೇಶ್ವರ ಸ್ವಾಮೀಜಿ ಅನಾವರಣ ಮಾಡಿದರು.
2 / 7
ಇದು ರೋಬೋಟಿಕ್ ಆನೆಯಾಗಿದ್ದು, ನೋಡುವುದಕ್ಕೆ ಯಥಾವತ್ತಾಗಿ ರಿಯಲ್ ಆನೆಯಂತೆಯೇ ಕಾಣಿಸುತ್ತದೆ. ಸದಾ ಕಿವಿ, ತಲೆ, ಸೊಂಡಿಲು ಹಾಗೂ ಬಾಲವನ್ನ ಅಲುಗಾಡಿಸುತ್ತಿರುತ್ತದೆ. ನೋಡಲು ದೈತ್ಯ ಗಾತ್ರದಾಗಿದ್ದು, ಸದಾ ಆಕ್ಟೀವ್ ಆಗಿರುವ ಈ ಆನೆಯನ್ನು ನೋಡಿದವರಿಗೆ ಜೀವಂತ ಆನೆಯೇ ಇಲ್ಲಿ ನಿಂತುಕೊಂಡಿದೆ ಎಂಬಂತೆ ಭಾಸವಾಗಿತ್ತದೆ.
3 / 7
ರಿಯಲ್ ಆನೆ ನೀಡಲು ಕೆಲ ಕಾನೂನುಗಳು ಅಡ್ಡಿ ಇರುವುದರಿಂದ ಶಿಲ್ಪಾ ಶೆಟ್ಟಿ ಇದೀಗ ಒಂದು ಸಂಕಲ್ಪವನ್ನು ಮಾಡಿಕೊಂಡು ಮಠಕ್ಕೆ ರೋಬಾಟಿಕ್ ಆನೆಯನ್ನು ಕೊಡುಗೆಯಾಗಿ ನೀಡಿದ್ದು, ಇದನ್ನು ನೋಡಲು ಜನ ಮುಗಿಬಿದ್ದಿದ್ದಾರೆ.
4 / 7
ದೇಶದ ಪಂಚಪೀಠಗಳಲ್ಲೇ ಮೊದಲ ಪೀಠವಾದ ರಂಭಾಪುರಿ ಮಠವು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಇದ್ದು, ಈ ಮಠದ ಭಕ್ತರಾಗಿರುವ ಬಾಲವುಡ್ ನಟಿ ಶಿಲ್ಪಾ ಶೆಟ್ಟಿ ದಂಪತಿ ಆಗಾಗ ಮಠಕ್ಕೆ ಬಂದು ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಮಠಕ್ಕೆ ಆನೆ ಕೊಡುವ ಸಂಕಲ್ಪ ಮಾಡಿಕೊಂಡಿದ್ದರು ಎನ್ನಲಾಗಿದೆ.
5 / 7
ಇನ್ನು ಇಂದೇ ರಂಭಾಪುರಿ ಮಠಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ರೇಣುಕಾಚಾರ್ಯ, ವೀರಭದ್ರ ದೇವರ ದರ್ಶನ ಪಡೆದುಕೊಂಡರು.
6 / 7
ಇನ್ನು ನೈಸರ್ಗಿಕ ಆನೆಯನ್ನು ನೀಡುವುದಕ್ಕೆ ಹಲವು ನಿಯಮಗಳು ಅಡ್ಡಿ ಬರುವ ಹಿನ್ನೆಲೆಯಲ್ಲಿ ಇದೀಗ ರೋಬೋಟಿಕ್ ಆನೆ ದಾನ ನೀಡುವವರ ಸಂಖ್ಯೆಯೂ ಹೆಚ್ಚಾಗಿದೆ. ಕರ್ನಾಟಕದಲ್ಲಿ ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿಯೂ ರೋಬೋಟಿಕ್ ಆನೆಯಿದೆ.