ಸಿದ್ದರಾಮಯ್ಯ ನನ್ನ ವಿರುದ್ಧ ಆರೋಪಗಳನ್ನು ಮಾಡಿ ಹಿಂಬಾಗಿಲಿಂದ ತಪ್ಪಿಸಿಕೊಳ್ಳುತ್ತಿದ್ದಾರೆ: ಸಚಿವ ಮುನಿರತ್ನ
ನನ್ನ ವಿರುದ್ಧ ಅರೋಪಗಳನ್ನು ಮಾಡುತ್ತಿರುವವರು ನ್ಯಾಯಾಲಯಕ್ಕೆ ದಾಖಲೆಗಳನ್ನು ಒದಗಿಸಿದರೆ ವಿಚಾರಣೆ ಎದುರಿಸುತ್ತೇನೆ. ಅವರು ದಾಖಲೆ ನೀಡದಿದ್ದರೆ ಅವರ ವಿರುದ್ಧ ಕೇಸ್ ದಾಖಲಿಸುತ್ತೇನೆ, ಸೆರೆಮನೆಗೆ ಹೋಗಲು ಅವರು ತಯಾರಾಗಿರಲಿ ಎಂದು ಮುನಿರತ್ನ ಹೇಳಿದರು.
ಬೆಂಗಳೂರು: ಕೋಲಾರ ಉಸ್ತುವಾರಿ ಸಚಿವ ಎನ್ ಮುನಿರತ್ನ (N Munirathna) ಬೆಂಗಳೂರಲ್ಲಿ ಸೋಮವಾರ ಸುದ್ದಿಗೋಷ್ಟಿಯೊಂದನ್ನು ನಡೆಸಿ ತಮ್ಮ ವಿರುದ್ಧ ಸಾಕ್ಷ್ಯಾಧಾರ, ದಾಖಲೆಗಳಿಲ್ಲದೆ (proof) ಶೇಕಡ 40ರಷ್ಟು ಲಂಚ ಪಡೆದ ಅರೋಪ ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕೂಡ ದಾಖಲೆರಹಿತವಾಗಿ ತಮ್ಮ ವಿರುದ್ಧ ಅರೋಪ ಮಾಡಿ ಹಿಂಬಾಗಿಲಿನಿಂದ ಓಡಿ ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ನನ್ನ ವಿರುದ್ಧ ಅರೋಪಗಳನ್ನು ಮಾಡುತ್ತಿರುವವರು ನ್ಯಾಯಾಲಯಕ್ಕೆ ದಾಖಲೆಗಳನ್ನು ಒದಗಿಸಿದರೆ ವಿಚಾರಣೆ ಎದುರಿಸುತ್ತೇನೆ. ಅವರು ದಾಖಲೆ ನೀಡದಿದ್ದರೆ ಅವರ ವಿರುದ್ಧ ಕೇಸ್ ದಾಖಲಿಸುತ್ತೇನೆ, ಸೆರೆಮನೆಗೆ ಹೋಗಲು ಅವರು ತಯಾರಾಗಿರಲಿ ಎಂದು ಮುನಿರತ್ನ ಹೇಳಿದರು.
Published on: Sep 19, 2022 12:26 PM