ಮಹಾರಾಷ್ಟ್ರ ಆಣೆಕಟ್ಟುಗಳಿಂದ ಭೀಮೆಗೆ ನೀರು, ಗಡಿಭಾಗಕ್ಕಿರುವ ವಿಜಯಪುರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಪ್ರವಾಹದ ಭೀತಿ

ಮಹಾರಾಷ್ಟ್ರ ಆಣೆಕಟ್ಟುಗಳಿಂದ ಭೀಮೆಗೆ ನೀರು, ಗಡಿಭಾಗಕ್ಕಿರುವ ವಿಜಯಪುರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಪ್ರವಾಹದ ಭೀತಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 19, 2022 | 11:13 AM

ವಿಜಯಪುರದ ಟಿವಿ9 ಪ್ರತಿನಿಧಿ ನೀಡಿರುವ ಮಾಹಿತಿ ಪ್ರಕಾರ ಭೀಮೆ ಉಕ್ಕಿ ಹರಿಯುತ್ತಿರುವುದರಿಂದ 7 ಬ್ರಿಜ್-ಕಂ-ಬ್ಯಾರೇಜುಗಳು ಸಂಪೂರ್ಣ ಮುಳುಗಡೆಯಾಗಿವೆ.

ಮಹಾರಾಷ್ಟ್ರ-ವಿಜಯಪುರ ಗಡಿಭಾಗದಲ್ಲಿ ಮಳೆಯ ಅಬ್ಬರ ಇನ್ನೂ ಕಡಿಮೆಯಾಗಿಲ್ಲ ಮಾರಾಯ್ರೇ. ಮಹಾರಾಷ್ಟ್ರದ ಉಜನಿ (Ujani) ಮತ್ತು ವೀರ್ (Veer) ಜಲಾಶಯಗಳಿಂ 1 ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ನೀರನ್ನು ಭೀಮಾ ನದಿಗೆ (Bheema River) ಹರಿಬಿಟ್ಟಿರುವುದರಿಂದ ನದಿಪಾತ್ರ ಗ್ರಾಮದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಹೋಗಲು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗುತ್ತಿದೆ. ವಿಜಯಪುರದ ಟಿವಿ9 ಪ್ರತಿನಿಧಿ ನೀಡಿರುವ ಮಾಹಿತಿ ಪ್ರಕಾರ ಭೀಮೆ ಉಕ್ಕಿ ಹರಿಯುತ್ತಿರುವುದರಿಂದ 7 ಬ್ರಿಜ್-ಕಂ-ಬ್ಯಾರೇಜುಗಳು ಸಂಪೂರ್ಣ ಮುಳುಗಡೆಯಾಗಿವೆ.