DK Shivakumar DA case; ಆದೇಶ ಹಿಂಪಡೆದು ಸಿದ್ದರಾಮಯ್ಯ ಅಕ್ಷಮ್ಯ ಅಪರಾಧವೆಸಗಿದ್ದಾರೆ: ಬಿಎಸ್ ಯಡಿಯೂರಪ್ಪ

DK Shivakumar DA case; ಆದೇಶ ಹಿಂಪಡೆದು ಸಿದ್ದರಾಮಯ್ಯ ಅಕ್ಷಮ್ಯ ಅಪರಾಧವೆಸಗಿದ್ದಾರೆ: ಬಿಎಸ್ ಯಡಿಯೂರಪ್ಪ
|

Updated on: Nov 24, 2023 | 7:41 PM

ಜಾರಿ ನಿರ್ದೇಶನಾಲಯ ಕೇಂದ್ರ ತನಿಖಾ ದಳಕ್ಕೆ ಶಿವಕುಮಾರ್ ಡಿಎ ಪ್ರಕರಣದಲ್ಲಿ ತನಿಖೆ ನಡೆಸಬೇಕೆಂದು ಹೇಳಿದ ಬಳಿಕ ಆಗಿನ ತಮ್ಮ ಸರ್ಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತ್ತು ಎಂದು ಯಡಿಯೂರಪ್ಪ ಹೇಳಿದರು. ಆದರೆ, ಶಿವಕುಮಾರ್ ರನ್ನು ರಕ್ಷಿಸಲು ಸಿದ್ದರಾಮಯ್ಯ ಸಿಬಿಐ ತನಿಖೆ ಆದೇಶವನ್ನು ವಾಪಸ್ಸು ಪಡೆದಿದ್ದು ಕಾನೂನುಬಾಹಿರ ಎಂದು ಅವರು ಹೇಳಿದರು.

ಬೆಂಗಳೂರು: ಡಿಕೆ ಶಿವಕುಮಾರ ಅಕ್ರಮ ಗಳಿಕೆ ಪ್ರಕರಣದಲ್ಲಿ (Shivakumar DA case) ಸಿದ್ದರಾಮಯ್ಯ ಸರಕಾರ (Siddaramaiah government) ಸಿಬಿಐ ತನಿಖೆ ಆದೇಶವನ್ನು ಹಿಂಪಡೆದಿದ್ದು ಅಕ್ಷಮ್ಯ ಅಪರಾಧ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಇಂದು ಸಾಯಂಕಾಲ ಬೆಂಗಳೂರಲ್ಲಿ ಹೇಳಿದರು. ಇದೇ ವಿಷಯದಲ್ಲಿ ಬೆಳಗ್ಗೆ ಮಾಧ್ಯಮಗಳಿಗೆ ನೀರಸ ಪ್ರತಿಕ್ರಿಯೆ ನೀಡಿದ್ದ ಅವರು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ವರದಿಗಳನ್ನು ಓದಿಕೊಂಡ ಬಳಿಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಜಾರಿ ನಿರ್ದೇಶನಾಯ ಕೇಂದ್ರ ತನಿಖಾ ದಳಕ್ಕೆ ಶಿವಕುಮಾರ್ ಡಿಎ ಪ್ರಕರಣದಲ್ಲಿ ತನಿಖೆ ನಡೆಸಬೇಕೆಂದು ಹೇಳಿದ ಬಳಿಕ ಆಗಿನ ತಮ್ಮ ಸರ್ಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತ್ತು ಎಂದು ಯಡಿಯೂರಪ್ಪ ಹೇಳಿದರು. ಆದರೆ, ಶಿವಕುಮಾರ್ ರನ್ನು ರಕ್ಷಿಸಲು ಸಿದ್ದರಾಮಯ್ಯ ಸಿಬಿಐ ತನಿಖೆ ಆದೇಶವನ್ನು ವಾಪಸ್ಸು ಪಡೆದಿದ್ದು ಕಾನೂನುಬಾಹಿರ. ಬಿಜೆಪಿ, ಸರ್ಕಾರದ ಕ್ರಮವನ್ನು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಿದೆ ಎಂದು ಹೇಳಿದ ಯಡಿಯೂರಪ್ಪ ಈಗಲೂ ಕಾಲ ಮಿಂಚಿಲ್ಲ, ಸಿದ್ದರಾಮಯ್ಯ ತಮ್ಮಿಂದಾಗಿರುವ ಪ್ರಮಾದಕ್ಕೆ ಜನತೆಯ ಕ್ಷಮೆ ಕೇಳಿ ತಮ್ಮ ಆದೇಶವನ್ನು ಹಿಂಪಡೆಯಲಿ ಎಂದು ಹೇಳಿದರು. ಈ ಪ್ರಕರಣದಲ್ಲಿ ಕೋರ್ಟ್ ಏನು ತೀರ್ಪು ನೀಡುತ್ತದೆಯೋ ಅದಕ್ಕೆ ಎಲ್ಲರು ಬದ್ದರಾಗಿರೋಣ, ಆದರೆ ಅದಕ್ಕೆ ಮೊದಲು ಸಿದ್ದರಾಮಯ್ಯ ತಮ್ಮ ನಿರ್ಧಾರ ಬದಲಾಯಿಸಲಿ ಎಂದು ಅವರು ಆಗ್ರಹಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಆಂಧ್ರಪ್ರದೇಶದಲ್ಲಿ 16ನೇ ಶತಮಾನದ ಆಂಜನೇಯ ದೇವಾಲಯಕ್ಕೆ ಹಾನಿ
ಆಂಧ್ರಪ್ರದೇಶದಲ್ಲಿ 16ನೇ ಶತಮಾನದ ಆಂಜನೇಯ ದೇವಾಲಯಕ್ಕೆ ಹಾನಿ
ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಸಂತೋಷ್ ಲಾಡ್, ಸಚಿವ
ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಸಂತೋಷ್ ಲಾಡ್, ಸಚಿವ
ಜಗಳಗಳೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು
ಜಗಳಗಳೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯ ಅತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?
ಸಿದ್ದರಾಮಯ್ಯ ಅತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?
ತೊರೆಕಾಡನಹಳ್ಳಿಗೆ ಕಾರಿನ ಬದಲು ಲಕ್ಸುರಿ ಬಸ್ಸಲ್ಲಿ ಹೋಗುವ ಅಗತ್ಯವಿತ್ತೇ?
ತೊರೆಕಾಡನಹಳ್ಳಿಗೆ ಕಾರಿನ ಬದಲು ಲಕ್ಸುರಿ ಬಸ್ಸಲ್ಲಿ ಹೋಗುವ ಅಗತ್ಯವಿತ್ತೇ?
ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು
ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು
ಅಭಿಮಾನಿಗಳ ಹರ್ಷೋದ್ಗಾರ... ಮಳೆಗೂ ಕುಗ್ಗದ ಕಿಂಗ್ ಕೊಹ್ಲಿಯ ಕ್ರೇಝ್
ಅಭಿಮಾನಿಗಳ ಹರ್ಷೋದ್ಗಾರ... ಮಳೆಗೂ ಕುಗ್ಗದ ಕಿಂಗ್ ಕೊಹ್ಲಿಯ ಕ್ರೇಝ್