ಜನ ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ನಿಯತ್ತಾಗಿ ಕೆಲಸ ಮಾಡುತ್ತಿದ್ದೇನೆ, ಸಿದ್ದರಾಮಯ್ಯನವರ ಹಾಗೆ ಸುಳ್ಳಾಡಲಾರೆ: ಬಸವರಾಜ ಬೊಮ್ಮಾಯಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 04, 2023 | 2:13 PM

ಸೌಭಾಗ್ಯಗಳನ್ನು ನೀಡುವುದಾಗಿ ಅಶ್ವಾಸನೆ ನೀಡಿ ದೌರ್ಭಾಗ್ಯಗಳನ್ನು ನೀಡಿದ ಸಿದ್ದಮಯ್ಯನವರಂತೆ ತಾನು ಸುಳ್ಳುಗಳನ್ನು ಹೇಳುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ತಮ್ಮನ್ನು ನಾಯಿಮರಿಗೆ ಹೋಲಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಆಡಿದ ಮಾತು ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಅದರೆ ನಾಯಿ (dog) ಒಂದು ನಿಯತ್ತಿನ ಪ್ರಾಣಿ ಅಂತ ಅವರಿಗೆ ಗೊತ್ತಿಲ್ಲ. ಜನ ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಿಯತ್ತಾಗಿ ಕೆಲಸ ಮಾಡುತ್ತಿರುವಾಗಿ ಮುಖ್ಯಮಂತ್ರಿಗಳು ಹೇಳಿದರು. ಸೌಭಾಗ್ಯಗಳನ್ನು ನೀಡುವುದಾಗಿ ಅಶ್ವಾಸನೆ ನೀಡಿ ದೌರ್ಭಾಗ್ಯಗಳನ್ನು ನೀಡಿದ ಸಿದ್ದಮಯ್ಯನವರಂತೆ ತಾನು ಸುಳ್ಳುಗಳನ್ನು ಹೇಳುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ