Karnataka Assembly Polls: ಸಿದ್ದರಾಮಯ್ಯ ಮಾತು ಆರಂಭಿಸುವಾಗ ಡಿಕೆ ಶಿವಕುಮಾರ್ ಹೆಸರು ಮರೆತಿದ್ದು ಅಚಾತುರ್ಯವೋ?

ಅರುಣ್​ ಕುಮಾರ್​ ಬೆಳ್ಳಿ

Updated on: Apr 17, 2023 | 11:39 AM

ನಂತರ ಸಿದ್ದರಾಮಯ್ಯ, ಸಾರಿ ಅಂತ ಹೇಳುತ್ತಾ, ಪಕ್ಕದಲ್ಲಿರುವವರ ಹೆಸರೇ ಮರೆತುಹೋಗುತ್ತದೆ ಎನ್ನುತ್ತಾರೆ. ಅವರ ಮಾತಿಗೆ ಶಿವಕುಮಾರ್ ಸೇರಿ ಎಲ್ಲರೂ ಜೋರಾಗಿ ನಗುತ್ತಾರೆ.

ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಮಾತಾಡುವಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ವೇದಿಕೆ ಮೇಲೆ ಕುಳಿತ ಎಲ್ಲ ನಾಯಕರ ಹೆಸರು ಹೇಳುತ್ತಾ ಸಂಬೋಧಿಸುತ್ತಾರಾದರೂ ತಮ್ಮ ಎಡಪಕ್ಕದಲ್ಲೇ ಕೂತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೆಸರು ಹೇಳುವುದನ್ನು ಮರೆತುಬಿಡುತ್ತಾರೆ. ಅದು ಅಚಾತುರ್ಯವೋ, ಉದ್ದೇಶಪೂರ್ವಕವೋ ಅಂತ ಅವರೇ ಹೇಳಬೇಕು. ಸಿದ್ದರಾಮಯ್ಯ ಬಲಪಕ್ಕ ಕೂತಿದ್ದ ಎಮ್ ಬಿ ಪಾಟೀಲ್ ಅವರಿಗೆ ಶಿವಕುಮಾರ್ ಹೆಸರು ಮರೆತಿದ್ದನ್ನು ಜ್ಞಾಪಿಸುತ್ತಾರೆ. ಆಗ, ಸಿದ್ದರಾಮಯ್ಯ, ಸಾರಿ ಅಂತ ಹೇಳುತ್ತಾ, ಪಕ್ಕದಲ್ಲಿರುವವರ ಹೆಸರೇ ಮರೆತುಹೋಗುತ್ತದೆ ಎನ್ನುತ್ತಾರೆ. ಅವರ ಮಾತಿಗೆ ಶಿವಕುಮಾರ್ ಸೇರಿ ಎಲ್ಲರೂ ಜೋರಾಗಿ ನಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾಅ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.