ಕೊಪ್ಪಳಕ್ಕೆ ಭೇಟಿ ಕೊಟ್ಟಿದ್ದ ವೇಳೆ ಭಾರೀ ನೂಕಾಟ, ತಳ್ಳಾಟ: ಸಿದ್ದರಾಮಯ್ಯ ಎಡಗೈಗೆ ಪೆಟ್ಟು

ಕೊಪ್ಪಳಕ್ಕೆ ಭೇಟಿ ಕೊಟ್ಟಿದ್ದ ವೇಳೆ ಭಾರೀ ನೂಕಾಟ, ತಳ್ಳಾಟ: ಸಿದ್ದರಾಮಯ್ಯ ಎಡಗೈಗೆ ಪೆಟ್ಟು

ಗಂಗಾಧರ​ ಬ. ಸಾಬೋಜಿ
|

Updated on:Apr 16, 2023 | 6:43 PM

ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ಕೊಪ್ಪಳ್ಳಕ್ಕೆ ಭೇಟಿ ನೀಡಿದ್ದರು. ಜಿಲ್ಲೆ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದರು. ಸಿದ್ದರಾಮಯ್ಯಗಾಗಿ ವೇದಿಕೆಗೆ ಅಭಿಮಾನಿಗಳು ನುಗಿದ್ದರು. ಈ ವೇಳೆ ಅವರ ಎಡಗೈಗೆ ಪೆಟ್ಟಾಗಿದೆ.

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಶನಿವಾರ ಕೊಪ್ಪಳ್ಳಕ್ಕೆ ಭೇಟಿ ನೀಡಿದ್ದರು. ಜಿಲ್ಲೆ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದರು. ಸಿದ್ದರಾಮಯ್ಯಗಾಗಿ ವೇದಿಕೆಗೆ ಅಭಿಮಾನಿಗಳು ನುಗಿದ್ದರು. ಈ ವೇಳೆ ಅವರ ಎಡಗೈಗೆ ಪೆಟ್ಟಾಗಿದೆ. ನೋವಿರುವ ಕಾರಣ ಕೊರಳ ಪಟ್ಟಿ ಹಾಕಿಕೊಂಡಿದ್ದಾರೆ. ಏರ್ ಪೋರ್ಟ್​ನಲ್ಲಿ ರಾಹುಲ್ ಗಾಂಧಿಗೆ ಆಹ್ವಾನ ನೀಡಲು ತೆರಳಿದ್ದ ಸಿದ್ದು, ಈ ವೇಳೆ ಸಿದ್ದರಾಮಯ್ಯ ಕೈಗೆ ಪೆಟ್ಟಾಗಿರುವುದನ್ನ ರಾಹುಲ್ ಗಮನಿಸಿದ್ದು, ಕೈಗೆ ಏನಾಗಿದೆ ಎಂದು ಕೇಳಿದ್ದಾರೆ. ಕೈಗೆ ತುಂಬಾ ನೋವು ಆಗಿರುವುದನ್ನ ಸಿದ್ದರಾಮಯ್ಯ ಹೇಳಿದ್ದಾರೆ. ಬಳಿಕ ಆರೋಗ್ಯದ ಕಡೆ ಗಮನಹರಿಸಿ, ವಿಶ್ರಾಂತಿ ಪಡೆಯುವಂತೆ ರಾಹುಲ್ ಸಲಹೆ ನೀಡಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Apr 16, 2023 06:43 PM