ಗ್ಯಾರಂಟಿಗಳ ಅನುಷ್ಠಾನದ ಭರದಲ್ಲಿ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿದೆ: ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

|

Updated on: Aug 30, 2023 | 6:10 PM

ಯಾವ ಗ್ಯಾರಂಟಿಯನ್ನೂ ವಾಗ್ದಾನ ಮಾಡಿದಂತೆ ಶೇಕಡ 100 ರಷ್ಟು ಜಾರಿಗೊಳಿಸಿಲ್ಲ. ಅವುಗಳ ಜಾರಿ ನೆಪದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಶುರುವಾಗಿದ್ದ ಕಾಮಗಾರಿಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಹೇಳಿದ ಯತ್ನಾಳ್, ಗುತ್ತಿಗೆದಾರರ ಬಿಲ್ ಗಳನ್ನು ಪಾವತಿಸದೆ ಸರ್ಕಾರ ನೆಪಗಳನ್ನು ಹೇಳುತ್ತಿದೆ ಎಂದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಎಂದಿನಂತೆ ಮತ್ತು ಎಂದಿನ ಧಾಟಿಯಲ್ಲೇ ರಾಜ್ಯ ಸರ್ಕಾರವನ್ನು (state government) ಟೀಕಿಸುವುದು ಮುಂದುವರಿಸಿದರು. ವರ್ಗಾವಣೆಯಲ್ಲಿ ನಡೆಸಿದ ವ್ಯವಹಾರವೇ ಸಿದ್ದರಾಮಯ್ಯ ಸರ್ಕಾರದ 100 ದಿನಗಳ ದೊಡ್ಡ ಸಾಧನೆ ಎಂದದು ಯತ್ನಾಳ್ ಹೇಳಿದರು. ಸರ್ಕಾರ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುತ್ತಿರುವ ಬಗ್ಗೆ ಮಾತಾಡಿದ ಅವರು ಚುನಾವಣೆಗಿಂತ ಮೊದಲು (pre poll) ಎಲ್ಲರಿಗೂ ಉಚಿತ-ಖಚಿತ-ನಿಶ್ಚಿತ ಅಂತ ಹೇಳಿದವರು, ಈಗ ಷರತ್ತುಗಳ ಮೇಲೆ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದ್ದಾರೆ. ಯಾವ ಗ್ಯಾರಂಟಿಯನ್ನೂ ವಾಗ್ದಾನ ಮಾಡಿದಂತೆ ಶೇಕಡ 100 ರಷ್ಟು ಜಾರಿಗೊಳಿಸಿಲ್ಲ. ಅವುಗಳ ಜಾರಿ ನೆಪದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಶುರುವಾಗಿದ್ದ ಕಾಮಗಾರಿಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಹೇಳಿದ ಯತ್ನಾಳ್, ಗುತ್ತಿಗೆದಾರರ ಬಿಲ್ ಗಳನ್ನು ಪಾವತಿಸದೆ ಸರ್ಕಾರ ನೆಪಗಳನ್ನು ಹೇಳುತ್ತಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on