ಅರಸು ದಾಖಲೆ ಬ್ರೇಕ್ ಮಾಡಲಿರುವ ಸಿಎಂ ಸಿದ್ದರಾಮಯ್ಯಗೆ ಪ್ರಲ್ಹಾದ್ ಜೋಶಿ ಟಕ್ಕರ್
ಸಿದ್ದರಾಮಯ್ಯ ಸಿಎಂ ಆಗಿ ಅರಸು ದಾಖಲೆ ಬ್ರೇಕ್ ಆಗಲಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ, ಸಿದ್ದರಾಮಯ್ಯ ಅತಿ ಹೆಚ್ಚು ಅವಧಿಗೆ ಸಿಎಂ ಆಗಿದ್ದಾರೆಯೇ ಹೊರತು ಅಭಿವೃದ್ಧಿ, ಸಾಧನೆ ಏನೂ ಆಗಿಲ್ಲ. ಸುದೀರ್ಘವಾಗಿ ಖಾಲಿ ಖಜಾನೆ ಮಾಡಿರುವುದೇ ಅವರ ಸಾಧನೆ ಎಂದು ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರು, ಜನವರಿ 05: ಸಿದ್ದರಾಮಯ್ಯ ಅತಿ ಹೆಚ್ಚು ಅವಧಿಗೆ ಸಿಎಂ ಆಗಿದ್ದಾರೆಯೇ ಹೊರತು ಅಭಿವೃದ್ಧಿ, ಸಾಧನೆ ಏನೂ ಆಗಿಲ್ಲ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿ ಅರಸು ದಾಖಲೆ ಬ್ರೇಕ್ ಆಗಲಿರುವ ವಿಚಾರವಾಗಿ ಪ್ರಯತಿಕ್ರಿಯಿಸಿದ ಪ್ರಲ್ಹಾದ್ ಜೋಶಿ, ಸಿದ್ದರಾಮಯ್ಯ ಸುದೀರ್ಘ ಅವಧಿಗೆ ಸಿಎಂ ಆಗಿರುವುದಕ್ಕೆ ಬೇಸರವಿಲ್ಲ. ರಾಜ್ಯದ ಜನರಿಗೆ ಇದು ಸಂತಸ ತರಬೇಕಿತ್ತು, ಆದರೆ ಜನರಿಗೆ ಸಂತಸವಾಗಿಲ್ಲ. ಸುದೀರ್ಘವಾಗಿ ಖಾಲಿ ಖಜಾನೆ ಮಾಡಿರುವುದೇ ಅವರ ಸಾಧನೆ. ಯಾವುದೇ ಅಭಿವೃದ್ಧಿ ಮಾಡದೆ ಸಿಎಂ ಆಗಿರುವುದೇ ಅವರ ಸಾಧನೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
