ಬೇರೆ ಶಾಸಕರ ಕ್ಷೇತ್ರಗಳಲ್ಲೂ ಸಿಎಂ ಸಿದ್ದರಾಮಯ್ಯ ಸ್ಥಳೀಯ ನಾಯಕರಿಗಿಂತ ಹೆಚ್ಚು ಜನಪ್ರಿಯ
ಸಿದ್ದರಾಮಯ್ಯ ಮತ್ತು ಮಹಾದೇವಪ್ಪ ತಮ್ಮ ಮಕ್ಕಳನ್ನು ರಾಜಕಾರಣಕ್ಕೆ ತಂದು ಶಾಸಕ ಮತ್ತು ಸಂಸದ ಮಾಡಿಸುವಲ್ಲಿ ಯಶ ಕಂಡಿದ್ದಾರೆ. ಮೈಸೂರಲ್ಲಿ ಮುಖ್ಯಮಂತ್ರಿ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾದರೂ ಯತೀಂದ್ರ ಸಿದ್ದರಾಮಯ್ಯ ನೆರಳಿನಂತೆ ಹಿಂಬಾಲಿಸುತ್ತಾರೆ. ಇತ್ತೀಚಿಗೆ ಸುನೀಲ್ ಬೋಸ್ ಸಹ ಸಿಎಂ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಬಂದರೆ ಜನರ ಕೇಕೆ, ಶಿಳ್ಳೆ ಮತ್ತು ಚಪ್ಪಾಳೆ ಕಿವಿಗಡಚಿಕ್ಕಿಸುತ್ತವೆ. ಇವತ್ತು ಜಿಲ್ಲೆಯ ಟಿ ನರಸೀಪುರ ಹೊರಳಹಳ್ಳಿ ಗ್ರಾಮದಲ್ಲಿ ಅವರು ಸುಮಾರು ₹ 470ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದಾಗ ಸನ್ನಿವೇಶ ಬೇರೆಯೇನೂ ಆಗಿರಲಿಲ್ಲ. ಟಿ ನರಸೀಪುರ ಶಾಸಕ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹಾದೇವಪ್ಪ ಮತ್ತು ಅವರ ಮಗ ಹಾಗೂ ಚಾಮರಾಜಪೇಟೆಯ ಸಂಸದ ಸುನೀಲ್ ಬೋಸ್ ಸ್ಥಳೀಯರಾದರೂ ಸಿದ್ದರಾಮಯ್ಯ ಹೆಚ್ಚು ಚಪ್ಪಾಳೆ ಗಿಟ್ಟಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಿಮ್ಮ ಪತ್ನಿಗೆ ಈಡಿ ನೋಟೀಸ್ ಜಾರಿಮಾಡಿದೆಯಾ ಅಂದಾಗ ಸಿಎಂ ಸಿದ್ದರಾಮಯ್ಯಗೆ ಕೋಪವುಕ್ಕಿತು
Follow Us
Latest Videos
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್ ಅಶೋಕ್
