Karnataka Assembly Polls: ಸಿದ್ದರಾಮಯ್ಯ ಮಹಿಳಾ ಕಾರ್ಯಕರ್ತರೊಂದಿಗೆ ಮಾತಾಡುತ್ತಿದ್ದರೆ ಬೇರೆಯವರ ಮಾತು ಕಿವಿಗೆ ಬೀಳಲ್ಲ!

|

Updated on: Apr 26, 2023 | 5:03 PM

ಸಿದ್ದರಾಮಯ್ಯ ಸಹ ಮಹಿಳೆ ಹೇಳುವುದನ್ನು ಆಸ್ಥೆಯಿಂದ ಕೇಳಿಸಿಕೊಳ್ಳುತ್ತಾರೆ. ಮಾತಿನಲ್ಲಿ ಅವರೆಷ್ಟು ಮಗ್ನರಾಗುತ್ತಾರೆಂದರೆ, ಭಾಷಣ ಮಾಡಲು ಹೆಸರು ಕೂಗಿದರೂ ಅವರ ಕಿವಿಗೆ ಬೀಳಲ್ಲ.

ವಿಜಯನಗರ: ಸಿದ್ದರಾಮಯ್ಯರಿಗೆ (Siddaramaiah) ಮಹಿಳಾ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಅನ್ನೋದನ್ನು ನಾವು ಅನೇಕ ಸಾರಿ ಹೇಳಿದ್ದೇವೆ. ಅವರು ಹೋದೆಡೆಯೆಲ್ಲ ಮಹಿಳಾ ಅಭಿಮಾನಿಗಳು, ಪಕ್ಷದ ಕಾರ್ಯಕರ್ತೆಯರು ಮುಕ್ಕುರುತ್ತಾರೆ. ವಿರೋಧ ಪಕ್ಷದ ನಾಯಕರು ಇಂದು ವಿಜಯಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚಿಸಿದರು. ಹೂವಿನ ಹಡಗಲಿ (Huvina Hadagali) ಕ್ಷೇತ್ರದಲ್ಲಿ ಪಿಟಿ ಪರಮೇಶ್ವರ್ ನಾಯಕ್ (PT Parameshwar Naik) ಪರ ಮತ ಯಾಚಿಸಲು ವೇದಿಕೆಯಲ್ಲಿ ಕೂತಾಗ ಒಬ್ಬ ಕಾರ್ಯಕರ್ತೆ ಮಾತಿಗಳಿಯುತ್ತಾರೆ. ಕಾರ್ಯಕರ್ತೆ ಸಿದ್ದರಾಮಯ್ಯನವರ ಕಿವಿಯಲ್ಲಿ ಬಹಳ ಹೊತ್ತಿನವರೆರೆ ಏನನ್ನೋ ಹೇಳುತ್ತಾರೆ. ಸಿದ್ದರಾಮಯ್ಯ ಸಹ ಮಹಿಳೆ ಹೇಳುವುದನ್ನು ಆಸ್ಥೆಯಿಂದ ಕೇಳಿಸಿಕೊಳ್ಳುತ್ತಾರೆ. ಮಾತಿನಲ್ಲಿ ಅವರೆಷ್ಟು ಮಗ್ನರಾಗುತ್ತಾರೆಂದರೆ, ಭಾಷಣ ಮಾಡಲು ಹೆಸರು ಕೂಗಿದರೂ ಅವರ ಕಿವಿಗೆ ಬೀಳಲ್ಲ. ಪಕ್ಕದಲ್ಲಿ ಕೂತ ಪರಮೇಶ್ವರ ನಾಯಕ್ ತಮ್ಮ ನಾಯಕನನ್ನು ಎಚ್ಚರಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ