Water Metro Service: ಭಾರತದ ಪ್ರಪ್ರಥಮ ಜಲ ಮೆಟ್ರೋ ಸೇವೆ ಕೇರಳದ ಕೊಚ್ಚಿಯಲ್ಲಿ ಇಂದು ಆರಂಭಗೊಂಡಿತು!

ವಾತಾನುಕೂಲಿತ ವಿದ್ಯುತ್ ಚಾಲಿತ ಹೈಬ್ರೀಡ್ ಬೋಟ್ 100 ಮತ್ತು 50 ಪ್ರಯಾಣಿಕರ ಎರಡು ಸಾಮರ್ಥ್ಯಗಳಲ್ಲಿ ಕಾರ್ಯಾಚರಣೆ ಅರಂಭಿಸಿದೆ. ವೈಟಿಲ-ಕಕ್ಕನಾಡ್ ಸೇವೆ ಗುರುವಾರದಿಂದ ಆರಂಭಗೊಳ್ಳಲಿದೆ.

Water Metro Service: ಭಾರತದ ಪ್ರಪ್ರಥಮ ಜಲ ಮೆಟ್ರೋ ಸೇವೆ ಕೇರಳದ ಕೊಚ್ಚಿಯಲ್ಲಿ ಇಂದು ಆರಂಭಗೊಂಡಿತು!
|

Updated on: Apr 26, 2023 | 6:28 PM

ಕೊಚ್ಚಿ (ಕೇರಳ):  ಭಾರತದ ಮೊಟ್ಟಮೊದಲ ಜಲ ಮೆಟ್ರೋ (Water Metro) ಸೇವೆ ಕೊಚ್ಚಿಯಲ್ಲಿ (Kochi) ಇಂದಿನಿಂದ ಆರಂಭಗೊಂಡಿತು. ಟಿಕೆಟ್ ದರಗಳು ಕನಿಷ್ಟ ರೂ. 20 ರಿಂದ ಹಿಡಿದು ಗರಿಷ್ಟ ರೂ. 40ರವರೆಗೆ ನಿಗದಿಪಡಿಸಲಾಗಿದೆ. ರೆಗ್ಯುಲರ್ ಪ್ರಯಾಣಿಕರು ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳನ್ನು ಪಡೆದುಕೊಳ್ಳಬಹುದಾಗಿದ್ದು ಇವುಗಳ ದರ ರೂ. 180 ರಿಂದ ಮೊದಲುಗೊಂಡು ರೂ. 1,500 ವರೆಗೆ ಇದೆ. ಪ್ರಯಾಣಿಕರು ಕೊಚ್ಚಿ ವನ್ ಕಾರ್ಡ್ ಖರೀದಿಸಿ ಕೊಚ್ಚಿ ಮೆಟ್ರೋ ರೇಲ್ (Kochi Metro Rail) ಮತ್ತು ಜಲ ಮೆಟ್ರೋ ಎರಡರಲ್ಲೂ ಪ್ರಯಾಣಿಸಬಹುದಾಗಿದೆ. ಜಲ ಮೆಟ್ರೋದ ಚೊಚ್ಚಲು ಯಾನದಲ್ಲಿ ಮಾಜಿ ಡಿಜಿಪಿ ಮತ್ತು ಕೊಚ್ಚಿ ಮೆಟ್ರೋ ರೇಲ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಲೋಕನಾಥ್ ಬೆಹ್ರಾ ಇತರ ಪ್ರಯಾಣಿಕರೊಂದಿಗೆ ಪಯಣಿಸಿದರು.

‘ನನಗೆ ತುಂಬಾ ಸಂತೋಷವಾಗುತ್ತಿದೆ ಮತ್ತು ಎಲ್ಲ ಪ್ರಯಾಣಿಕರನ್ನು ಈ ರಮ್ಯವಾದ ನಾವೆಗೆ ಸ್ವಾಗತಿಸುತ್ತೇನೆ. ನಾವೆಯ ಪ್ರಾಯೋಗಿಕ ಯಾನಗಳಲ್ಲಿ ನಾನು ಈಗಾಗಲೇ ಪ್ರಯಾಣಿಸಿದ್ದೇನಾದರೂ ಪ್ರಯಾಣಿಕರೊಂದಿಗೆ ಹೋಗುತ್ತಿರುವುದು ಹೆಚ್ಚು ತೃಪ್ತಿದಾಯಕವಾಗಿದೆ. ಹೆಚ್ಚೆಚ್ಚು ಜನ ಜಲ ಮೆಟ್ರೋನಲ್ಲಿ ಪ್ರಯಾಣಿಸಲಾಲರಂಭಿಸಿದ ನಂತರ ರಸ್ತೆಗಳಲ್ಲಿ ವಾಹನ ಸಂಚಾರ ಕಮ್ಮಿಯಾಗಿ ಜನ ತಮ್ಮ ಗಮ್ಯವನ್ನು ತಡವಿಲ್ಲದೆ ತಲುಪಬಹುದು,’ ಎಂದು ಲೋಕನಾಥ್ ಬೆಹ್ರಾ ಹೇಳುತ್ತಾರೆ.

ಇದನ್ನೂ ಓದಿ:  ಕನ್ವೆನ್ಷನ್ ಹಾಲ್‌ಗಳಲ್ಲಿ ಮದ್ಯ ಪೂರೈಸಲು ಅನುಮತಿ ನೀಡುವ ತಮಿಳುನಾಡು ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

ಜಲ ಮೆಟ್ರೋ ನಿಲ್ದಾಣ ಮತ್ತು ಬೋಟ್ ಗಳನ್ನು ವಿಶೇಷ ಚೇತನರೂ ಸುಲಭವಾಗಿ ಉಪಯೋಗಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ದೊಡ್ಡ ಅಲೆಗಳು ಎದ್ದಾಗ ಇಲ್ಲವೇ ಚಿಕ್ಕ ಚಿಕ್ಕ ಅಲೆಗಳು ಏಳುವಾಗ ಪ್ರಯಾಣಿಕರು ನಾವೆಯಲ್ಲಿ ಹತ್ತಲು ಮತ್ತು ಇಳಿಯಲು ಯಾವ ಸಮಸ್ಯೆಯೂ ಉಂಟಾಗದ ಹಾಗೆ ಜಲ ಮೆಟ್ರೋ ನಿಲ್ದಾಣಗಳನ್ನು ಡಿಸೈನ್ ಮಾಡಲಾಗಿದೆ.
‘ಇದೊಂದು ವಿನೂತನ ಅನುಭವ, ಬಹಳ ರೋಚಕವಾಗಿದೆ ಮತ್ತು ಪ್ರಯಾಣ ಕೂಡ ಆರಾಮದಾಯಕವಾಗಿದೆ,’ ಎಂದು ಒಬ್ಬ ಪ್ರಯಾಣಿಕ ಹೇಳುತ್ತಾರೆ.

‘ಸಾಮಾನ್ಯವಾಗಿ ನಾವು ಬೈಕ್ ಮತ್ತು ಬಸ್ ಮೂಲಕ ಪ್ರಯಾಣಿಸುತ್ತೇವೆ ಅದರೆ ಇದು ಅದ್ಭುತವಾಗಿದೆ, ನಿರಾತಂಕವಾದ ಪಯಣ. ಬೇರೆ ಬೋಟ್ ಮತ್ತು ದೋಣಿಗಳು ಅಲುಗಾಡುತ್ತವೆ. ಅದರೆ ಜಲ ಮೆಟ್ರೋ ಬೋಟ್ ನಲ್ಲಿ ಪ್ರಯಾಣ ಸುಖಕರವಾಗಿದೆ,’ ಎಂದು ಮತ್ತೊಬ್ಬ ಪ್ರಯಾಣಿಕ ಹೇಳುತ್ತಾರೆ.

ಇದನ್ನೂ ಓದಿ:  Jawan: ‘ಜವಾನ್​’ ವಿಡಿಯೋ ಲೀಕ್​; ಶಾರುಖ್​ ಖಾನ್​ ಪರವಾಗಿ ಕಟ್ಟುನಿಟ್ಟಿನ ಆದೇಶ ನೀಡಿದ ದೆಹಲಿ ಹೈಕೋರ್ಟ್​

ವಾತಾನುಕೂಲಿತ ವಿದ್ಯುತ್ ಚಾಲಿತ ಹೈಬ್ರೀಡ್ ಬೋಟ್ 100 ಮತ್ತು 50 ಪ್ರಯಾಣಿಕರ ಎರಡು ಸಾಮರ್ಥ್ಯಗಳಲ್ಲಿ ಕಾರ್ಯಾಚರಣೆ ಅರಂಭಿಸಿದೆ. ವೈಟಿಲ-ಕಕ್ಕನಾಡ್ ಸೇವೆ ಗುರುವಾರದಿಂದ ಆರಂಭಗೊಳ್ಳಲಿದೆ.

ಇಡೀ ಯೋಜನೆ ಸಂಪೂರ್ಣಗೊಂಡಾಗ ವಾಟರ್ ಮೆಟ್ರೋ 78 ಬೋಟ್ ಗಳ ಮೂಲಕ ಕೊಚ್ಚಿಯ 10 ದ್ವೀಪಗಳು ಮತ್ತು 38 ಟರ್ಮಿನಲ್ ಗಳ ನಡುವೆ ಸಂಪರ್ಕ ಕಲ್ಪಿಸಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ