Chikkaballapura: ಸುಮಲತಾ ಅಂಬರೀಶ್ ಬಿಜೆಪಿ ಸೇರುವ ಬಗ್ಗೆ ಪ್ರತಿಕ್ರಿಯೆ ನೀಡಲು ಅವರೇನು ನಮ್ಮ ಪಕ್ಷದವರಾ? ಸಿದ್ದರಾಮಯ್ಯ
ಬಾಗೇಪಲ್ಲಿಗೆ ಇಂದು ಹೆಲಿಕಾಪ್ಟರ್ನಲ್ಲಿ ಆಗಮಿಸಿದ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯಯನವರನ್ನು ಮಾಧ್ಯಮದ ಪ್ರತಿನಿಧಿಯೊಬ್ಬರು ಸುಮಲತಾ ಅವರ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಸಿಡಿಮಿಡಿಗೊಂಡರು.
ಚಿಕ್ಕಬಳ್ಳಾಪುರ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಬಿಜೆಪಿಗೆ ಸೇರುವುದು ಖಚಿತವಾಗುತ್ತಿದ್ದಂತೆಯೇ ರಾಜಕೀಯ ವಲಯಗಳಲ್ಲಿ ಅವರ ಬಗ್ಗೆ ಚರ್ಚೆಗಳು ಶುರುವಾಗಿವೆ. ಜಿಲ್ಲೆಯ ಬಾಗೇಪಲ್ಲಿಗೆ ಇಂದು ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯರನ್ನು (Siddaramaiah) ಮಾಧ್ಯಮದ ಪ್ರತಿನಿಧಿಯೊಬ್ಬರು ಸುಮಲತಾ ಅವರ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಸಿಡಿಮಿಡಿಗೊಂಡರು. ‘ಅವರೇನು ನಮ್ಮ ಪಾರ್ಟಿಯವರೇನ್ರೀ?’ ಅಂತ ಅವರು ಮರು ಪ್ರಶ್ನೆ ಹಾಕಿದಾಗ, ಆ ಪ್ರತಿನಿಧಿ ಸುಮಲತಾ ಮಂಡ್ಯದಿಂದ (Mandya) ಸ್ಪರ್ಧಿಸಿದಾಗ ಬೆಂಬಲ ನೀಡಿದ್ದರಲ್ಲ ಅನ್ನುತ್ತಾರೆ. ಅದರಿಂದ ಮತ್ತಷ್ಟು ವ್ಯಗ್ರರಾಗುವ ಸಿದ್ದರಾಮಯ್ಯ, ‘ನೀವು ಬೆಂಬಲಿಸಿರಬಹುದು, ನಾನಲ್ಲ’ ಎನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 10, 2023 12:15 PM