Tumakuru: ಕೇಸರಿ ಬಿಳಿ ಹಸಿರು ಬಣ್ಣದ ಪೇಟ ತಿರಸ್ಕರಿಸಿದ ಸಿದ್ದರಾಮಯ್ಯ
ಮಾತ್ ಮಾತಿಗೂ ಜಾತ್ಯಾತೀತ ನಾಯಕ ಎಂದು ಹೇಳಿಕೊಳ್ಳುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೇಸರಿ ಬಿಳಿ ಹಸಿರು ಬಣ್ಣದ ಪೇಟವನ್ನೇ ತಿರಿಸ್ಕರಿಸುವುದೇ?
ತುಮಕೂರು: ನನಗೆ ಕೇಸರಿ ಕಂಡರೆ ಭಯ ಎಂದು ಹೇಳುವ, ತಿಲಕ ಇಟ್ಟರೆ ಅಳಿಸಿಹಾಕುವ, ಕೇಸರಿಯನ್ನು ವಿರೋಧಿಸವ, ಮೈಕ್ ಕೈಗೆ ಸಿಗುತ್ತಿದ್ದಂತೆ ಜಾತ್ಯಾತೀತಗೆ ಬಗ್ಗೆ ಭಾಷಣ ಮಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕೇಸರಿ ಬಿಳಿ ಹಸಿರು ಬಣ್ಣದ ಪೇಟವನ್ನೇ ತಿರಸ್ಕರಿಸಿದ್ದಾರೆ ಮಾರಾಯ್ರೆ. ತುಮಕೂರ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಿದ್ದರಾಮಯ್ಯ ಪ್ರಚಾರಕ್ಕೆ ಆಗಮಿಸಿದ್ದರು. ಶಿರಾ, ಚಿಕ್ಕನಾಯಕನಹಳ್ಳಿ ಸೇರಿ ಹಲವೆಡೆ ಸಿದ್ದರಾಮಯ್ಯ ಕ್ಯಾಂಪೇನ್ ಮಾಡಿದರು. ಶಿರಾದಲ್ಲಿ ಟಿ.ಬಿ ಜಯಚಂದ್ರ ಪರ ಸಿದ್ರಾಮಯ್ಯ ಮತಯಾಚನೆ ಮಾಡಿದರು. ವೇದಿಕೆ ಮೇಲೆ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಕಂಬಲಿ ಹಾಕಿಸಿಕೊಂಡ ಸಿದ್ದರಾಮಯ್ಯಗೆ ಕೇಸರಿ ಬಿಳಿ ಹಸಿರು ಬಣ್ಣದ ಪೇಟ ತೊಡಿಸಲು ನಾಯಕರು ಮುಂದಾಗಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು ತಿರಸ್ಕರಿಸಿದರು. ನಂತರ ಹಾರ ಹಾಕಿಸಿಕೊಂಡರು.
ಇದನ್ನೂ ಓದಿ: ಟಗರು ವಿರುದ್ಧ ರಾಜಹುಲಿ ಘರ್ಜನೆ: ವರುಣಾದಲ್ಲಿ ಸಿದ್ದರಾಮಯ್ಯ ಸೋಲಿಸುವ ಜವಾಬ್ದಾರಿ ನನ್ನದು ಎಂದ ಬಿಎಸ್ ಯಡಿಯೂರಪ್ಪ
ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ