ದಾವಣಗೆರೆ: ಕಾಂಗ್ರೆಸ್ ಧುರೀಣ ಮತ್ತು ಮಾಜಿ ಸಂಸದ ಆರ್ ಧ್ರುವನಾರಾಯಣ (R Dhruvanarayana) ಅವರ ಮರಣದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ನಡೆಯುತ್ತಿದ್ದ ಪ್ರಜಾಧ್ವನಿ ಯಾತ್ರೆಯನ್ನು (Prajadhvani Yatre) ಮೊಟಕುಗೊಳಿಸಿ ಮೈಸೂರಿಗೆ ತೆರಳಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಇಂದು ಯಾತ್ರೆ ಮುಂದುವರಿಸಲು ದಾವಣಗೆರೆಗೆ ಆಗಮಿಸಿದರು. ಹೆಲಿಕಾಪ್ಟರ್ ಒಂದರಲ್ಲಿ ಅವರ ಜಿಲ್ಲೆಯ ಹೊನ್ನಾಳಿಗೆ ಆಗಮಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಎಂದಿನಂತೆ ಹೆಲಿಪ್ಯಾಡ್ ಬಳಿ ಸಿದ್ದರಾಮಯ್ಯರನ್ನು ಕಾರ್ಯಕರ್ತರು ಮತ್ತು ಮಾಧ್ಯಮ ಪ್ರತಿನಿಧಿಗಳು ಸುತ್ತುವರೆದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ