Himanta Biswa Sarma: ಅಸ್ಸಾಂ ಮುಖ್ಯಮಂತ್ರಿಗಳಿಗೆ ಕರ್ನಾಟಕದಲ್ಲಿ ಈ ಪಾಟಿ ಭದ್ರತೆಯ ಅವಶ್ಯಕತೆಯಿದೆಯೇ?

Arun Kumar Belly

|

Updated on: Mar 13, 2023 | 1:47 PM

ಮನಸ್ಸಿನಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ, ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವತ್ತಾದರೂ ಈ ಪಾಟಿ ಭದ್ರತೆ ವ್ಯವಸ್ಥೆ ಮಾಡಿಕೊಂಡಿದ್ದರೆ ಅಥವಾ ಅವರು ಗುವಹಾಟಿಗೆ ಹೋದರೆ ಇಂಥ ಭದ್ರತೆ ಕಲ್ಪಿಸಲಾಗುತ್ತದೆಯೇ?

ಕೊಪ್ಪಳ: ಕರ್ನಾಟಕದಲ್ಲಿ ಬಿಜೆಪಿ ನಡೆಸುತ್ತಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅಸ್ಸಾಂ ಭಾಗವಹಿಸಲು ಹಿಮಂತ್ ಬಿಸ್ವಾ ಸರ್ಮ (Himanta Biswa Sarma) ಕೊಪ್ಪಳಕ್ಕೆ ಆಗಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಗವಿಮಠ ಗವಿಸಿದ್ದೇಶ್ವರ ಗದ್ದುಗೆಗೆ ಭೇಟಿ ನೀಡಿ ಶ್ರೀಗಳ ಪಡೆದರು. ಅದೆಲ್ಲ ಸರಿ, ಅವರಿಗೆ ಒದಗಿಸಲಾಗಿರುವ ಅಥವಾ ಅವರೇ ನಿಯೋಜಿಸಿಕೊಂಡಿರುವ ಭದ್ರತೆ (security) ಆಶ್ಚರ್ಯವನ್ನುಂಟು ಮಾಡುತ್ತದೆ. ಪ್ರಾಯಶಃ ಒಬ್ಬ ಪ್ರಧಾನ ಮಂತ್ರಿಗೆ ಒದಗಿಸಲಾಗುವ ಭದ್ರತೆಗಿಂತ ಹೆಚ್ಚಿನ ಭದ್ರತೆ ಅವರಿಗಿದೆ! ಹಿಮಂತ್ ಸರ್ಮಾ ಒಂದು ರಾಜ್ಯದ ಮುಖ್ಯಮಂತ್ರಿ ನಿಜ, ಆದರೆ ಮನಸ್ಸಿನಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ, ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಯಾವತ್ತಾದರೂ ಈ ಪಾಟಿ ಭದ್ರತೆ ವ್ಯವಸ್ಥೆ ಮಾಡಿಕೊಂಡಿದ್ದರೆ ಅಥವಾ ಅವರು ಗುವಹಾಟಿಗೆ ಹೋದರೆ ಇಂಥ ಭದ್ರತೆ ಕಲ್ಪಿಸಲಾಗುತ್ತದೆಯೇ? ಕಲ್ಪಿಸಿಕೊಳ್ಳಲಾಗುತ್ತಿಲ್ಲ ಸ್ವಾಮಿ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada