Anna Bhagya Scheme: ಅಕ್ಕಿ ಹೊಂದಿಸಲು ನೆರವಾಗುವಂತೆ ಕೇಂದ್ರಕ್ಕೆ ಮನವಿ ಮಾಡಲು ಹೋಗಿದ್ದ ಸಿಎಂ ಸಿದ್ದರಾಮಯ್ಯ ಬರಿಗೈಲಿ ವಾಪಸ್ಸು

Edited By:

Updated on: Jun 22, 2023 | 4:00 PM

ಅನ್ನಭಾಗ್ಯ ಯೋಜನೆ ಜಾರಿಮಾಡುವುದು ವಿಳಂಬವಾಗಲಿದೆ ಅಂತ ಖುದ್ದು ಮುಖ್ಯಮಂತ್ರಿಗಳೇ ಹೇಳುತ್ತಿರುವುದು ಸ್ಥಿತಿಯ ಗಾಂಭೀರ್ಯತೆಯನ್ನು ಸೂಚಿಸುತ್ತದೆ.

ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಬೇಕಿರುವ ಬೃಹತ್ ಪ್ರಮಾಣದ ಅಕ್ಕಿ ಹೊಂದಿಸಲು ಸಿದ್ದರಾಮಯ್ಯ (Siddaramaiah) ಮತ್ತು ಅವರ ಸಚಿವ ಸಂಪುಟ ಪರದಾಟದ ಮುಂದುವರಿದಿರುವಂತೆಯೇ ಇದೇ ಕಾರಣಕ್ಕೆ ನಿನ್ನೆ ದೆಹಲಿಗೆ (Delhi) ಹೋಗಿದ್ದ ಮುಖ್ಯಮಂತ್ರಿ ಇಂದು ವಾಪಸ್ಸಾಗಿದ್ದಾರೆ. ವಿಮಾನ ನಿಲ್ದಾಣದಿಂದ ಅವರು ತಮ್ಮ ನಿವಾಸಕ್ಕೆ ವಾಪಸ್ಸಾಗುತ್ತಿರುವುದನ್ನು ಇಲ್ಲಿ ನೋಡಬಹುದು. ಉತ್ತರ ಕರ್ನಾಟಕದ ಕಡೆ ಯಾವುದಾದರೂ ಕೆಲಸದ ನಿಮಿತ್ತ ಹೋಗಿ ವಾಪಸ್ಸಾದಾಗ ಹೋದ ಕೆಲಸ ಏನಾಯ್ತು ಅಂತ ಕೇಳುವ ವಾಡಿಕೆ ಇದೆ. ಸಿದ್ದರಾಮಯ್ಯ ಹೋದ ಕೆಲಸ ಪೂರ್ತಿಯಾಗಿಲ್ಲ. ಅಮಿತ್ ಶಾ (Amit Shah) ಅವರನ್ನು ಭೇಟಿ ಮಾಡಿದ್ದು, ಅವರು ಸಂಬಂಧಪಟ್ಟ ಇಲಾಖೆ ಸಚಿವರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರಂತೆ. ಅನ್ನಭಾಗ್ಯ ಯೋಜನೆ ಜಾರಿಮಾಡುವುದು ವಿಳಂಬವಾಗಲಿದೆ ಅಂತ ಖುದ್ದು ಮುಖ್ಯಮಂತ್ರಿಗಳೇ ಹೇಳುತ್ತಿರುವುದು ಸ್ಥಿತಿಯ ಗಾಂಭೀರ್ಯತೆಯನ್ನು ಸೂಚಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ