Assembly Session; ಆಡಳಿತ ನಡೆಸುವುದನ್ನು ಬಿಜೆಪಿಯಿಂದ ಕಲಿಯುವ ಅವಶ್ಯಕತೆಯಿಲ್ಲ: ಸಿದ್ದರಾಮಯ್ಯ
ಸ್ಪೀಕರ್ ಕೂತ್ಕೊಳ್ಳಿ ಗಲಾಟೆ ಬೇಡ ಅಂತ ಹೇಳಿದರೂ ಸದನದ ಸೀಲಿಂಗ್ ಹಾರಿಹೋಗುವ ಹಾಗಿದ್ದ ಗಣ್ಯ ಜನಪ್ರತಿನಿಧಿಗಳ ಗಲಾಟೆ ನಿಲ್ಲಲ್ಲ. ಬಿಜೆಪಿಯ ಅಶ್ಥಥ್ ನಾರಾಯಣ, ಆರ್ ಆಶೋಕ, ಆರವಿಂದ್ ಬೆಲ್ಲದ್ ಮತ್ತು ಆಡಳಿತ ಪಕ್ಷದ ಸಿದ್ದರಾಮಯ್ಯ, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್ ಮೊದಲಾದವರು ಜೋರು ಧ್ವನಿಯಲ್ಲಿ ಮಾತಾಡುವುದು ಮುಂದುವರಿಸುತ್ತಾರೆ.
ಬೆಂಗಳೂರು: ಸದನದಲ್ಲಿ ಇಂದು ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಒಂದೇ ಸಮ ಕಿರುಚಾಡಿದರು. ಅವರ ಕಿರುಚಾಟದಿಂದ ಸ್ಪೀಕರ್ ಯುಟಿ ಖಾದರ್ ಸಹ ಬೇಸತ್ತು ಹೊಗುವ ಸನ್ನಿವೇಶ ಸೃಷ್ಟಿಯಾಗಿತ್ತು. ಬಿಜೆಪಿ ನಾಯಕ ಅಶ್ವಥ್ ನಾರಾಯಣ ಮಾತುಗಳು ಮತ್ತು ಅವರ ಹಾವಭಾವ ನಾಟಕೀಯವಾಗಿತ್ತು. ಭಷ್ಟಾಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದರಿಂದ ಯಾರು ಏನು ಹೇಳುತ್ತಿದ್ದಾರೆ ಅನ್ನೋದು ಗೊತ್ತಾಗಲಿಲ್ಲ. ಸದಸ್ಯರ ಕೂಗಾಟ-ಒದರಾಟದಿಂದ ಸದನ ಸರ್ಕಾರೀ ಪ್ರಾಥಮಿಕ ಶಾಲೆಯಂತೆ ಗೋಚರವಾಗತೊಡಗಿತ್ತು. ಭ್ರಷ್ಟಾಚಾರವನ್ನು ತಡೆಯುತ್ತೇವೆ ಅಂತ ಅಧಿಕಾರಕ್ಕೆ ಬಂದು ಕೇವಲ ಬರೀ ಭ್ರಷ್ಟಾಚಾರದಲ್ಲಿ ಮುಳುಗಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅಧಿಕಾರಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ಅಶ್ವಥ್ ನಾರಾಯಣ ಹೇಳಿದ್ದಕ್ಕೆ ಉಗ್ರಾವತಾರ ತಳೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನಡೆಸೋದು ಹೇಗೆ ಅಂತ ನಿಮ್ಮಿಂದ ಕಲಿಯಬೇಕಾ? ಅಂತ ಹೇಳಿ ಇವರೆಲ್ಲ ಸದನದ ಕಲಾಪ ನಡೆಯಲು ಬಿಡುತ್ತಿಲ್ಲ, ಇವರನ್ನು ಹೊರಗೆ ಹಾಕಿ ಅಂತ ಸಭಾಧ್ಯಕ್ಷರಿಗೆ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವ್ಹೈಟ್ ಕಾಮಗಾರಿಗೆ ಚಾಲನೆ ನೀಡುವ ಮೊದಲು ಶಿವಕುಮಾರ್-ಅಶ್ವಥ್ ನಾರಾಯಣ ನಡುವೆ ಆತ್ಮೀಯ ಮಾತು