Assembly Session: ಚರ್ಚೆ ಬೇಕೇಬೇಕು ಎಂದ ವಿಪಕ್ಷ ಸದಸ್ಯರಿಗೆ ಯಾವುದೇ ಚರ್ಚೆಗೆ ಸಿದ್ಧ ಎಂದ ಸಿದ್ದರಾಮಯ್ಯ
ಪ್ರಶ್ನೋತ್ತರ ವೇಳೆ ಮುಗಿದ ಬಳಿಕ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು, ಸ್ವಲ್ಪ ತಾಳ್ಮೆಯಿರಲಿ ಎಂದು ಸ್ಪೀಕರ್ ಖಾದರ್ ಹೇಳಿದರೂ, ವಿರೋಧ ಪಕ್ಷದ ನಾಯಕರು ಗಲಾಟೆ ಮುಂದುವರಿಸುತ್ತಾರೆ. ಪ್ರಶ್ನೋತ್ತರ ಅವಧಿಯ ಬಳಿಕ ಚರ್ಚೆಗೆ ಅವಕಾಶ ಕಲ್ಪಿಸುವ ಆಶ್ವಾಸನೆಯನ್ನು ಸ್ಪೀಕರ್ ಅವರಿಂದ ಪಡೆದ ಬಳಿಕ ಬಿಜೆಪಿ ಶಾಸಕರು ಸುಮ್ಮನಾಗುತ್ತಾರೆ.
ಬೆಂಗಳೂರು: ಇದರ ನಿರೀಕ್ಷೆ ಕನ್ನಡಿಗರಿಗಿತ್ತು. ವಿಧಾನ ಸಭೆ ಮುಂಗಾರು ಅಧಿವೇಶನದ ಮೊದಲ ದಿನವಾಗಿದ್ದ ಇಂದು ಕಲಾಪ ಶುರುವಾದ ಕೂಡಲೇ ವಿರೋಧ ಪಕ್ಷದ ನಾಯಕರು ಸರ್ಕಾರದ ಮೇಲೆ ಮುಗಿ ಬಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬೃಹತ್ ಪ್ರಮಾಣದಲ್ಲಿ ಅವ್ಯವಹಾರ, ಮುಡಾ ಹಗರಣ, ಕಾನೂನು ಸುವ್ಯವಸ್ಥೆ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿ ಸರಕಾರವನ್ನು ಕಟಕಟೆಗೆ ತಳ್ಳುವ ಪ್ರಯತ್ನ ಮಾಡಿದರು. ರಾಜ್ಯದ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದ ಅವ್ಯವಹಾರಗಳು ಯಾವತ್ತೂ ನಡೆದಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ, ಅರವಿಂದ ಬೆಲ್ಲದ್, ಆಶ್ವಥ್ ನಾರಾಯಣ, ಸುನೀಲ ಕುಮಾರ್ ಮೊದಲಾದವರು ಎದ್ದು ನಿಂತು ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಸ್ಪೀಕರ್ ಯುಟಿ ಖಾದರ್ ಅವರನ್ನು ಆಗ್ರಹಿಸಿದರು.. ಸರ್ಕಾರದ ಪರವಾಗಿ ಮಾತಾಡಲು ಎದ್ದು ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾವುದೇ ವಿಷಯದ ಮೇಲಿನ ಚರ್ಚೆಗೆ ಹಿಂತೆಗೆಯುವುದಿಲ್ಲ, ಎಲ್ಲ ಪ್ರಶ್ನೆಗಳಿಗೆ ಉತ್ತರವಿದೆ ಅಂತ ಹೇಳಿದರು. ಬಿಜೆಪಿ ನಾಯಕರು ಒಟ್ಟಿಗೆ ಮಾತಾಡುತ್ತಿದ್ದರಿಂದ ಯಾರ ಮಾತುಗಳೂ ಸ್ಪಷ್ಟವಾಗಿ ಕೇಳಿಸುವುದಿಲ್ಲ. ಸಿದ್ದರಾಮಯ್ಯ, ಜನ ಪಾಠ ಕಲಿಸಿದರೂ ನಿಮಗೆ ಬುದ್ಧಿ ಬರಲಿಲ್ಲವಲ್ಲ ಅನ್ನುತ್ತ ಕೂರುತ್ತಾರೆ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಧಾನಸಭೆ ಅಧಿವೇಶನದ ಮೊದಲ ದಿನವೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಬಿಜೆಪಿ