ಸರ್ಕಾರದ ವಿರುದ್ಧ ಗುಡುಗುವ ಸಿದ್ದರಾಮಯ್ಯ ಕೋಡುಬಳೆ ತಿನ್ನುವಾಗ ನೆತ್ತಿಗೇರಿಸಿಕೊಂಡು ವೇದಿಕೆ ಮೇಲೆ ಕೆಮ್ಮಿದ ಪ್ರಸಂಗ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 20, 2022 | 7:45 PM

ಅಸಲಿಗೆ ಆಗಿದ್ದೇನೆಂದರೆ, ಸಭೆ ನಡೆಯುತ್ತಿರುವಾಗ ಸಿದ್ದರಾಮಯ್ಯನವರಿಗೆ ತಿನ್ನಲು ಮಿಕ್ಸ್ಚರ್ ಮತ್ತು ಒಂದು ಕೋಡುಬಳೆ ನೀಡಲಾಗುತ್ತದೆ. 75 ವರ್ಷ ವಯಸ್ಸಿನ ಸಿದ್ದರಾಮಯ್ಯ ಸ್ಟೆಂಟ್ ಹಾಕಿಸಿಕೊಂಡಿರುವುದರಿಂದ ತಾವು ಸೇವಿಸುವ ಆಹಾರ ಬಗ್ಗೆ ಎಚ್ಚರದಿಂದ ಇರುತ್ತಾರೆ.

ಮೈಸೂರು: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ (corruption) ತಾಂಡವಾಡುತ್ತಿದೆ ಎಂದು ಆರೋಪಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮೈಸೂರು ಗ್ರಾಮೀಣ ಕಾಂಗ್ರೆಸ್ (Congress) ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿತು. ಸಭೆಯಲ್ಲಿ ಸಿದ್ದರಾಮಯ್ಯ (Siddaramaiah) ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ನಾವು ಇದಕ್ಕೂ ಮೊದಲು ಹೇಳಿದಂತೆ ಸಿದ್ದರಾಮಯ್ಯನವರು ಭಾಗವಹಿಸುವ ಸಭೆ ಅಥವಾ ಕಾರ್ಯಕ್ರಮದಲ್ಲಿ ಏನಾದರೊಂದು ವಿಶೇಷತೆ ಇರುತ್ತದೆ. ಇಲ್ಲಿ ನಡೆದಿರುವ ಘಟನೆ ಗಮನಿಸಿ. ಇದು ಅಂಥ ಮಹತ್ವದ್ದೇನೂ ಅಲ್ಲ ಮಾರಾಯ್ರೇ. ಆದರೆ, ಇದರಲ್ಲಿ ವಿರೋಧ ಪಕ್ಷದ ನಾಯಕನ ಇನ್ವಾಲ್ವ್ ಮೆಂಟ್ ಇರೋದ್ರಿಂದ ನಿಮ್ಮ ಗಮನಕ್ಕೆ ತರುತ್ತಿದ್ದೇವೆ, ಅಷ್ಟೇ.

ಅಸಲಿಗೆ ಆಗಿದ್ದೇನೆಂದರೆ, ಸಭೆ ನಡೆಯುತ್ತಿರುವಾಗ ಸಿದ್ದರಾಮಯ್ಯನವರಿಗೆ ತಿನ್ನಲು ಮಿಕ್ಸ್ಚರ್ ಮತ್ತು ಒಂದು ಕೋಡುಬಳೆ ನೀಡಲಾಗುತ್ತದೆ. 75 ವರ್ಷ ವಯಸ್ಸಿನ ಸಿದ್ದರಾಮಯ್ಯ ಸ್ಟೆಂಟ್ ಹಾಕಿಸಿಕೊಂಡಿರುವುದರಿಂದ ತಾವು ಸೇವಿಸುವ ಆಹಾರ ಬಗ್ಗೆ ಎಚ್ಚರದಿಂದ ಇರುತ್ತಾರೆ. ಇದು ಅವರು ಆಪ್ತರಿಗೆಲ್ಲ ಗೊತ್ತಿರುವ ವಿಚಾರವೇ.

ಆದರೆ, ಮಿಕ್ಸ್ಚರ್ ಮತ್ತು ಕೋಡುಬಳೆಯಂಥ ಮುರುಕಲು ತಿಂಡಿಗಳನ್ನು ಕಂಡಾಗ ಆಹಾರದ ವಿಷಯದಲ್ಲಿ ಪತ್ತೆ (abstinence) ಮಾಡುವ ವ್ಯಕ್ತಿಯ ಮನಸಲ್ಲೂ ತಿನ್ನುವ ಆಸೆ ಹುಟ್ಟಿ ಬಿಡುತ್ತದೆ ಮಾರಾಯ್ರೇ. ಸಿದ್ದರಾಮಯ್ಯ ಇಂಥ ತಿಂಡಿಗಳಿಂದ ದೂರ ಇರುತ್ತಾರೆ ಅನ್ನೋದು ಈ ಮಾತಿನ ಅರ್ಥವಲ್ಲ.

ಸಿದ್ದರಾಮಯ್ಯ ಹಸಿದಿದ್ದರು ಅನಿಸುತ್ತೆ ಮಾರಾಯ್ರೇ. ತಿಂಡಿಯನ್ನು ಅವರ ಮುಂದೆ ಇಟ್ಟ ಕೂಡಲೇ ತಿನ್ನಲಾರಂಭಿಸುತ್ತಾರೆ. ಆದರೆ ಕೋಡುಬಳೆಯನ್ನು ಮುರಿದು ಬಾಯಿಗೆ ಹಾಕಿಕೊಂಡಾಗ ಅವರಿಗೆ ನೆತ್ತಿಗೇರುತ್ತದೆ ಮತ್ತು ಅವರು ಕೆಮ್ಮಲಾರಂಭಿಸುತ್ತಾರೆ.

ತಿಂಡಿ ಕೊಟ್ಟವರು ನೀರು ಕೊಡುವುದನ್ನು ಮರೆತಿರುತ್ತಾರೆ. ಎಲ್ಲರೂ ನೀರು ನೀರು ಅನ್ನತೊಡುವ ಮೊದಲೇ ಸಿದ್ದರಾಮಯ್ಯ ಸನ್ನೆಯ ಮೂಲಕ ನೀರು ಬೇಕು ಅಂತ ಸೂಚಿಸುತ್ತಾರೆ. ಒಂದರ್ಧ ನಿಮಿಷದ ಬಳಿಕ ಅವರ ಕೈಗೆ ನೀರಿನ ಬಾಟಲಿ ಬರುತ್ತದೆ. ನೀರು ಕುಡಿದ ನಂತರ ಬಳಿಕ ಅವರ ಕೆಮ್ಮು ನಿಲ್ಲುತ್ತದೆ.

ಇದನ್ನೂ ಓದಿ:   ನಾನು ಬರೋವರೆಗೆ ಮಾತ್ರ ನನ್ನ ಚೇರಲ್ಲಿ ಕೂತುಕೊಳ್ಳಬಹುದು ಅಂತ ಕಾರ್ಯಕರ್ತನಿಗೆ ಸಿದ್ದರಾಮಯ್ಯ ಹೇಳಿದರು!