ಸಿದ್ದರಾಮಯ್ಯ ಕ್ಷಮೆಯಾಚಿಸದಿದ್ದರೆ ತಕ್ಕ ಪಾಠ ಕಲಿಸಲು ಸಮುದಾಯ ಸಿದ್ಧವಾಗಿದೆ: ಸಚ್ಚಿದಾನಂದ ಮೂರ್ತಿ, ಬ್ರಾಹ್ಮಣ ಸಮುದಾಯ ಅಧ್ಯಕ್ಷ
ಮಲ್ಲೇಶಪ್ಪ ಆಡಿದ ಮಾತುಗಳನ್ನು ಸಿದ್ದರಾಮಯ್ಯನವರು ಇದುವರೆಗೆ ಖಂಡಿಸದಿರುವುದನ್ನು ಗಮನಿಸಿದರೆ ಅವರ ಕುಮ್ಮಕ್ಕಿನಿಂದಲೇ ಮಲ್ಲೇಶಪ್ಪ ಅಂಥ ಮಾತುಗಳನ್ನಾಡಿದ್ದಾರೆ ಅನ್ನೋದು ಸ್ಪಷ್ಟವಾಗುತ್ತದೆ ಎಂದು ಮೂರ್ತಿ ಹೇಳಿದರು.
ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆಪ್ತರಾಗಿರುವ ಮಲ್ಲೇಶಪ್ಪ (Malleshappa) ಎನ್ನುವವರು ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ (Sachidananda Murthy) ಆರೋಪಿಸಿದರು. ಬಳ್ಳಾರಿಯಲ್ಲಿ ಗುರುವಾರದಂದು ಸುದ್ದಿಗೋಷ್ಟಿಯೊಂದನ್ನು ಅಯೋಜಿಸಿ ಮಾತಾಡಿದ ಮೂರ್ತಿ, ಮಲ್ಲೇಶಪ್ಪ ಆಡಿದ ಮಾತುಗಳನ್ನು ಸಿದ್ದರಾಮಯ್ಯನವರು ಇದುವರೆಗೆ ಖಂಡಿಸದಿರುವುದನ್ನು ಗಮನಿಸಿದರೆ ಅವರ ಕುಮ್ಮಕ್ಕಿನಿಂದಲೇ ಮಲ್ಲೇಶಪ್ಪ ಅಂಥ ಮಾತುಗಳನ್ನಾಡಿದ್ದಾರೆ ಅನ್ನೋದು ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಅವರು ಕೂಡಲೇ ಕ್ಷಮೆಯಾಚಿಸದಿದ್ದರೆ ತಮ್ಮ ಸಮುದಾಯ ಪಾಠ ಕಲಿಸಲು ರೆಡಿಯಾಗಿದೆ ಅಂತ ಮೂರ್ತಿ ಎಚ್ಚರಿಸಿದರು.