ಬೀದಿಗೆ ಬಿತ್ತು ಪೋಷಕ ಕಲಾವಿದರ ಸಂಘದ ಗಲಾಟೆ; ನಟಿ ರಾಣಿ ಮಾಡಿದ ಆರೋಪಗಳು ಒಂದೆರಡಲ್ಲ
Dingri Nagaraj | Adugodi Srinivas: ಪೋಷಕ ಕಲಾವಿದರ ಸಂಘದಲ್ಲಿ ಅನೇಕ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ನಟಿ ರಾಣಿ ಆರೋಪ ಮಾಡಿದ್ದಾರೆ. ‘ನೊಂದಿರುವ ನಮಗೆ ನ್ಯಾಯಬೇಕು’ ಎಂದು ಅವರು ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ (Dingri Nagaraj) ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಅವರ ಮೇಲೆ ನಟಿ ರಾಣಿ ಅನೇಕ ಆರೋಪಗಳನ್ನು ಹೊರಿಸಿದ್ದಾರೆ. ಸಂಘದಲ್ಲಿ ಅನೇಕ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ‘ಆಡುಗೋಡಿ ಶ್ರೀನಿವಾಸ್ (Adugodi Srinivas) ಅವರು ಮಹಿಳಾ ಸದಸ್ಯರಿಗೆ ನೀಲಿಚಿತ್ರ ಕಳಿಸಿದ್ದಾರೆ’ ಎಂದು ಕೂಡ ರಾಣಿ ಆರೋಪಿಸಿದ್ದಾರೆ. ತಮಗೆ ಇರುವ ಅನೇಕ ಅಸಮಾಧಾನವನ್ನು ಅವರು ಹೊರಹಾಕಿದ್ದಾರೆ. ‘ನೊಂದಿರುವ ನಮಗೆ ನ್ಯಾಯಬೇಕು’ ಎಂದು ರಾಣಿ ಒತ್ತಾಯಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 17, 2022 02:17 PM
Latest Videos