ಡಿಸಿಎಂ ಡಿಕೆಶಿ ಬಣದ ತಂತ್ರಕ್ಕೆ ಸಿಎಂ ಬಣದಿಂದ ಪ್ರತಿತಂತ್ರ: ಸಿದ್ದರಾಮಯ್ಯ ಬೆಂಬಲಿಗರ ಪ್ಲ್ಯಾನ್ ಏನು?
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್‌ನಲ್ಲಿ, ಸಿಎಂ ಸಿದ್ದರಾಮಯ್ಯ ಆಪ್ತ ಬಣವು ಪಕ್ಷದೊಳಗಿನ ಗೊಂದಲ, ಗುಂಪುಗಾರಿಕೆ ಕುರಿತು ಚರ್ಚಿಸಿದೆ. ದೆಹಲಿಗೆ ಹೋಗುವುದರ ಬದಲು ಹೈಕಮಾಂಡ್ ನಾಯಕರನ್ನೇ ರಾಜ್ಯಕ್ಕೆ ಕರೆಸುವ ಅಥವಾ ಮುಖ್ಯಮಂತ್ರಿಗಳ ಮೂಲಕ ಸಂಪರ್ಕಿಸುವ ತಂತ್ರ ರೂಪಿಸಿದೆ. ಆ ಮೂಲಕ ಡಿಸಿಎಂ ಡಿಕೆಶಿ ಬಣಕ್ಕೆ ಟಕ್ಕರ್ ನೀಡಲು ಸಿದ್ಧವಾಗಿದೆ.
ಬೆಂಗಳೂರು, ನವೆಂಬರ್ 21: ಡಿಸಿಎಂ ಡಿಕೆಶಿ ಬಣ ದೆಹಲಿಗೆ ಭೇಟಿ ನೀಡಿರುವ ಹಿನ್ನಲೆ ಸಿದ್ದರಾಮಯ್ಯ ಅಪ್ತ ಬಣದಿಂದಲೂ ಪ್ರತಿತಂತ್ರ ರೆಡಿಯಾಗಿದೆ. ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್‌ನಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ದೆಹಲಿಗೆ ಹೋದ್ರೆ ಹೈಕಮಾಂಡ್ ಮನ್ನಣೆ ಕೊಡುವುದಿಲ್ಲ. ಗುಂಪುಗಾರಿಕೆಗೆ ಪಕ್ಷದ ಹೈಕಮಾಂಡ್ ಪ್ರಾಮುಖ್ಯತೆ ನೀಡದ ಕಾರಣ, ಹೈಕಮಾಂಡ್ ನಾಯಕರಿಗೆ ರಾಜ್ಯದ ಪರಿಸ್ಥಿತಿಯನ್ನು ವಿವರಿಸೋಣ. ಅವರೇ ಇಲ್ಲಿಗೆ ಬರುವಂತೆ ಮನವಿ ಮಾಡೋಣ ಎಂದು ಡಿನ್ನರ್ ಮೀಟಿಂಗ್‌ನಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತರು ಹೇಳಿದ್ದಾರೆ. ಪಕ್ಷದಲ್ಲಿರುವ ಗೊಂದಲಕ್ಕೆ ಹೈಕಮಾಂಡ್ ಶೀಘ್ರ ತೆರೆ ಎಳೆಯಬೇಕು. ಇಲ್ಲದಿದ್ರೆ ಪಕ್ಷಕ್ಕೆ ಇನ್ನಷ್ಟು ಡ್ಯಾಮೇಜ್ ಆಗುತ್ತೆ. ಇನ್ನೂ 6-7 ತಿಂಗಳು ಅಂತಾ ವಿಳಂಬ ಮಾಡಿದರೆ ಕಷ್ಟ. ಹೀಗಾಗಿ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಬೇಕೆಂದು ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಕೆಪಿಎಸ್ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ

