ಸಚಿವ ಸಂಪುಟದ ಸದಸ್ಯರು ಒಬ್ಬೊಬ್ಬರಾಗಿ ಸಿದ್ದರಾಮಯ್ಯರನ್ನು ಊಟಕ್ಕೆ ಕರೆದು ವಿದಾಯ ಹೇಳುತ್ತಿದ್ದಾರೆ: ಆರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ

Updated on: Jan 07, 2025 | 4:58 PM

ಬಿಬಿಎಂಪಿಯ ಬಿಜೆಪಿ ಮೇಯರ್​ಗಳ ಅಧಿಕಾರಾವಧಿ ಮುಗಿಯುತ್ತಾ ಬಂದಾಗ ಅವರನ್ನು ಮನೆಗೆ ಊಟಕ್ಕೆ ಕರೆದು ಸತ್ಕರಿಸುತ್ತಿದ್ದ ದಿನಗಳನ್ನು ವಿಪಕ್ಷ ನಾಯಕ ಅರ್ ಅಶೋಕ ನೆನಪಿಸಿಕೊಂಡಿದ್ದಾರೆ. ಕಳೆದ 20 ತಿಂಗಳ ಅವಧಿಯಲ್ಲ್ಲಿ ಸಿದ್ದರಾಮಯ್ಯ ಸುಮಾರು ಒಂದು ಸಾವಿರ ಸಲ ನಾನೇ ಮುಖ್ಯಮಂತ್ರಿ ಅಂತ ಹೇಳಿಕೊಂಡಿದ್ದಾರೆ, ಬೇರೆ ಯಾವುದೇ ಮುಖ್ಯಮಂತ್ರಿ ಹಾಗೆ ಹೇಳಿದ್ದನ್ನು ತನ್ನ ರಾಜಕೀಯ ಬದುಕಿನಲ್ಲಿ ನೋಡಿಲ್ಲ ಎಂದು ಅಶೋಕ ಹೇಳಿದರು.

ಬೆಂಗಳೂರು: ಸಿದ್ದರಾಮಯ್ಯ ಅಧಿಕಾರದಿಂದ ನಿರ್ಗಮಿಸುವುದು ಖಚಿತವಾಗಿದೆ, ಹಾಗಾಗೇ ಅವರ ಸಂಪುಟದ ಹಿರಿಯ ಸಹೋದ್ಯೋಗಿಗಳು ಒಬ್ಬರ ನಂತರ ಮತ್ತೊಬ್ಬರು ಔತಣಕೂಟಗಳನ್ನು ಏರ್ಪಡಿಸಿ ಅವರಿಗೆ ವಿದಾಯ ಕೋರುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ವ್ಯಂಗ್ಯವಾಡಿದ್ದಾರೆ. ಮೊದಲು ಸತೀಶ್ ಜಾರಕಿಹೊಳಿ ಅವರು ಸಿದ್ದರಾಯ್ಯಗೆ ಡಿನ್ನರ್ ಪಾರ್ಟಿ ಆಯೋಜಿಸಿದ್ದರು, ಈಗ ಜಿ ಪರಮೇಶ್ವರ್ ಅವರು ಊಟಕ್ಕೆ ಕರೆದಿದ್ದಾರೆ, ಮುಂದೆ ಡಿಕೆ ಶಿವಕುಮಾರ್ ಡಿನ್ನರ್ ಆಯೋಜಿಸಿದ ದಿನ ಸಿದ್ದರಾಮಯ್ಯ ಅಧಿಕಾರಾವಧಿ ಮುಗಿದಂತೆ, ಯಾಕೆಂದರೆ ಸಿಎಂ ಸ್ಥಾನವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಅಂತ ಖುದ್ದು ಶಿವಕುಮಾರ್ ಅವರೇ ಹೇಳಿದ್ದಾರೆ ಎಂದು ಅಶೋಕ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವಿಡಿಯೋ ಎಡಿಟ್‌ ಮಾಡಿ ಹರಿಬಿಟ್ಟ ಆರೋಪ: ಡಿಕೆ ಶಿವಕುಮಾರ್​ ಸೇರಿ ಇತರರ ವಿರುದ್ಧ ಆರ್​ ಅಶೋಕ್ ದೂರು

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.