ಮೋಸಗಾರರು ಏಳಿಗೆಯಾಗಲ್ಲ ಎಂದ ನಟ ಸಿದ್ದಾರ್ಥ್; ಸಮಂತಾರನ್ನು ನೆನಪು ಮಾಡಿಕೊಂಡ ನೆಟ್ಟಿಗರು
ನಾಗ ಚೈತನ್ಯ ಅವರನ್ನು ಪ್ರೀತಿಸಿ ಸಮಂತಾ ಮದುವೆ ಆದರು. ಈಗ ನಾಲ್ಕು ವರ್ಷಗಳ ದಾಂಪತ್ಯ ಜೀವನವನ್ನು ಮುರಿದು ಇಬ್ಬರೂ ಬೇರೇ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬೆನ್ನಲ್ಲೇ ನಟ ಸಿದ್ದಾರ್ಥ್ ಮಾಡಿರುವ ಟ್ವೀಟ್ ಒಂದು ವೈರಲ್ ಆಗುತ್ತಿದೆ
ಸಿದ್ದಾರ್ಥ್ ಹಾಗೂ ಸಮಂತಾ ಅಕ್ಕಿನೇನಿ ಒಂದು ಕಾಲದಲ್ಲಿ ರಿಲೇಶನ್ಶಿಪ್ನಲ್ಲಿದ್ದರು. ಆದರೆ, ಕಾರಣಾಂತರಗಳಿಂದ ಇವರ ಸಂಬಂಧ ಮುರಿದು ಬಿದ್ದಿತ್ತು. ಆ ನಂತರ ನಾಗ ಚೈತನ್ಯ ಅವರನ್ನು ಪ್ರೀತಿಸಿ ಸಮಂತಾ ಮದುವೆ ಆದರು. ಈಗ ನಾಲ್ಕು ವರ್ಷಗಳ ದಾಂಪತ್ಯ ಜೀವನವನ್ನು ಮುರಿದು ಇಬ್ಬರೂ ಬೇರೇ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬೆನ್ನಲ್ಲೇ ನಟ ಸಿದ್ದಾರ್ಥ್ ಮಾಡಿರುವ ಟ್ವೀಟ್ ಒಂದು ವೈರಲ್ ಆಗುತ್ತಿದೆ. ಇದು ಸಮಂತಾ ಅವರ ಕುರಿತು ಮಾಡಿದ ಟ್ವೀಟ್ ಎನ್ನಲಾಗುತ್ತಿದೆ.
ಶಾಲೆಯಲ್ಲಿ ಶಿಕ್ಷಕರಿಂದ ನಾನು ಕಲಿತ ಮೊದಲ ಪಾಠ, ‘ವಂಚಕರು ಎಂದಿಗೂ ಏಳಿಗೆಯಾಗಲ್ಲ’ ಎಂದು ಸಿದ್ದಾರ್ಥ್ ಬರೆದುಕೊಂಡಿದ್ದಾರೆ. ಇದು ಸಮಂತಾ ಉದ್ದೇಶಿಸಿ ಮಾಡಿದ ಟ್ವೀಟ್ ಎಂದು ಹೇಳಲಾಗುತ್ತಿದೆ. ಸಿದ್ದಾರ್ಥ್ಗೆ ಎಲ್ಲರೂ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಸಮಂತಾ ಮತ್ತು ನಾಗ ಚೈತನ್ಯ ಡಿವೋರ್ಸ್ಗೆ ಇದುವೇ ಕಾರಣ? ಅಕ್ಕಿನೇನಿ ಕುಟುಂಬದಲ್ಲಿ ಅಸಲಿಗೆ ಆಗಿದ್ದೇನು?
Loading...
Unable to load recommendations.
Follow Us
