ಸಿಕ್ಕಿಂ ಪರ್ವತ ಪ್ರದೇಶದಲ್ಲಿ ಸೇನಾವಾಹನ ಪ್ರಪಾತಕ್ಕೆ ಉರುಳಿ 16 ಯೋಧರ ದುರ್ಮರಣ, 4 ಯೋಧರಿಗೆ ಗಂಭೀರ ಗಾಯ

ಗಾಯಗೊಂಡಿರುವವರನ್ನು ಏರ್ ಲಿಫ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಪಾತಕ್ಕೆ ಉರುಳಿದ ವಾಹನ ನುಜ್ಜುಗುಜ್ಜಾಗಿದೆ.

ಸಿಕ್ಕಿಂ ಪರ್ವತ ಪ್ರದೇಶದಲ್ಲಿ ಸೇನಾವಾಹನ ಪ್ರಪಾತಕ್ಕೆ ಉರುಳಿ 16 ಯೋಧರ ದುರ್ಮರಣ, 4 ಯೋಧರಿಗೆ ಗಂಭೀರ ಗಾಯ
ನುಜ್ಜುಗುಜ್ಜಾಗಿರುವ ಸೇನಾ ವಾಹನ
Edited By:

Updated on: Dec 23, 2022 | 7:31 PM

Sikkim: ಜೀವದ ಹಂಗು ತೊರೆದು ಗಡಿ ಕಾಯುವ ನಮ್ಮ ಸೈನಿಕರು ಹಲವಾರು ಸಲ ಯುದ್ಧ ಹೊರತಾದ ಕಾರಣಗಳಿಗೆ ದುರ್ಮರಣಕ್ಕೀಡಾಗುತ್ತಾರೆ. ಸಿಕ್ಕಿಂ ರಾಜ್ಯದಲ್ಲಿ ಚೀನಾದ ಗಡಿಭಾಗದಲ್ಲಿರುವ ಜೀಮಾ (Zema) ಪರ್ವತ ಪ್ರದೇಶದಲ್ಲಿರುವ ಚೆಟ್ಟನ್ ನಿಂದ (Chettan) ತೆಂಗುಗೆ ಯೋಧರನ್ನು ಹೊತ್ತೊಯ್ಯುತ್ತಿದ್ದ ಸೇನಾವಾಹನವೊಂದು (Army vehicle) ಸ್ಕಿಡ್ ಆಗಿ ಪ್ರಪಾತಕ್ಕೆ ಉರುಳಿ ಬಿದ್ದ ಕಾರಣ 16 ಯೋಧರು ಸ್ಥಳದಲ್ಲೇ ಮರಣವನ್ನಿಪ್ಪಿದ್ದಾರೆ ಮತ್ತು ಇತರ 4 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವವರನ್ನು ಏರ್ ಲಿಫ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಪಾತಕ್ಕೆ ಉರುಳಿದ ವಾಹನ ನುಜ್ಜುಗುಜ್ಜಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ