ತನ್ನನ್ನು ತಾನೇ ನಾಮಿನೇಟ್ ಮಾಡಿಕೊಂಡ ಹನುಮಂತ; ಈ ವಾರವೇ ಔಟ್?

|

Updated on: Oct 23, 2024 | 3:29 PM

ಬಿಗ್ ಬಾಸ್ ಮನೆಯಲ್ಲಿ ಇರಲು ಹನುಮಂತನಿಗೆ ಕಷ್ಟ ಆಗುತ್ತಿಲ್ಲ. ಹಾಗಾಗಿ ಅವರು ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ವೈಲ್ಡ್​ ಕಾರ್ಡ್​ ಮೂಲಕ ‘ಬಿಗ್ ಬಾಸ್​ ಕನ್ನಡ ಸೀಸನ್ 11’ ಕಾರ್ಯಕ್ರಮಕ್ಕೆ ಬಂದ ಹನುಮಂತ ಅವರಿಗೆ ಇಷ್ಟು ಬೇಗನೇ ಈ ಆಟ ಸಾಕಾಗಿ ಹೋಗಿದೆ. ಸ್ಪರ್ಧಿಗಳ ಜಗಳಗಳನ್ನು ನೋಡಿ ಅವರು ಸುಸ್ತಾಗಿದ್ದಾರೆ.

ನಟಿ ಹಂಸಾ ಅವರನ್ನು ಸಿಂಗರ್ ಹನುಮಂತ ನಾಮಿನೇಟ್ ಮಾಡಿದ್ದಾರೆ. ಜೊತೆಗೆ ತಮ್ಮದೇ ಹೆಸರನ್ನು ಕೂಡ ನಾಮಿನೇಟ್ ಮಾಡಿದ್ದಾರೆ. ಹಾಗಾಗಿ ಅವರು ಈ ವಾರವೇ ಎಲಿಮಿನೇಟ್ ಆಗುತ್ತಾರಾ ಎಂಬ ಅನುಮಾನ ಮೂಡಿದೆ. ಇಂದಿನ (ಅಕ್ಟೋಬರ್​ 23) ಸಂಚಿಕೆಯ ಹೊಸ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.