ಯಾವುದೇ ಪಕ್ಷದಲ್ಲಿದ್ದರೂ ಇರುವಷ್ಟು ದಿನ ನಿಷ್ಠೆಯಿಂದ ಇರುತ್ತೇನೆ:ಸಿಪಿ ಯೋಗೇಶ್ವರ್
ಬೇರೆ ಬೇರೆ ಪಕ್ಷಗಳಲ್ಲಿದ್ದಾಗ ಪರಸ್ಪರ ಟೀಕೆಗಳನ್ನು ಮಾಡಿದ್ದು ಸತ್ಯ, ಆದರೆ ಅವನ್ನೆಲ್ಲ ಸ್ಪೋರ್ಟಿವ್ ಆಗಿ ತೆಗೆದುಕೊಂಡು ಮುಂದುವರಿಯುತ್ತೇವೆ ಎಂದು ಯೋಗೇಶ್ವರ್ ಹೇಳಿದರು. ಹಾಗೆ ನೋಡಿದರೆ, ಕಾಂಗ್ರೆಸ್ ಪಕ್ಷ ಯೋಗೇಶ್ವರ್ಗೆ ಹೊಸದೇನೂ ಅಲ್ಲ, ಹಿಂದೊಮ್ಮೆ ಅವರು ಪಕ್ಷದಲ್ಲಿದ್ದರು.
ಬೆಂಗಳೂರು: ಇಷ್ಟು ದಿನ ಬಿಜೆಪಿಯಲ್ಲಿದ್ದವರಿಗೆ ಈಗ ಕಾಂಗ್ರೆಸ್ನಲ್ಲಿ ನಿಷ್ಠೆಯಿಂದ ಕೆಲಸ ಮಾಡುವುದು ಸಾಧ್ಯವೋ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಪಿ ಯೋಗೇಶ್ವರ್, ಪಕ್ಷ ಯಾವುದೇ ಅಗಿರಲಿ, ಅಲ್ಲಿ ಇರುವಷ್ಟು ದಿನ ನಿಷ್ಠೆಯಿಂದ ಇರ್ತೇನೆ ಎಂದು ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಅವರು, ಕಳೆದ ಮೂರೂವರೆ ದಶಕಗಳಿಂದ ತಾನು ಮತ್ತು ಡಿಕೆ ಸಹೋದರರು ರಾಜಕಾರಣದಲ್ಲಿದ್ದೇವೆ, 3-4 ಸಲ ಸುರೇಶ್ ಅವರ ಗೆಲುವಿಗೆ ಕಾರಣನಾಗಿರುವಂತೆ ಒಮ್ಮೆ ಸೋಲಿಗೂ ಕಾರಣನಾಗಿದ್ದೇನೆ ಎಂದು ಯೋಗೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯೋಗೇಶ್ವರ್ ರಾಜೀನಾಮೆ ಬೆನ್ನಲ್ಲೇ ಚುರುಕುಗೊಂಡ ತಂತ್ರಗಾರಿಕೆ: ಎನ್ಡಿಎ ಅಚ್ಚರಿ ಅಭ್ಯರ್ಥಿ ಯಾರು?
Published on: Oct 23, 2024 02:08 PM
Latest Videos