ಮ್ಯೂಸಿಕ್ ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜಾನಪದ ಕಲಾವಿದ ಮೈಲಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ವೇಳೆ ಮಹಾಲಿಂಗಪುರ ಪೊಲೀಸರು, ಮೈಲಾರಿಯನ್ನು ಬಂಧಿಸಿದ್ದು, ಸದ್ಯ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇನ್ನು ಮೈಲಾರಿ ಜೈಲಿಗೆ ಹೋಗುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದು, ನನ್ನ ಏಳಿಗೆ ಸಹಿಸಲಾಗದೇ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬಾಗಲಕೋಟೆ, (ಡಿಸೆಂಬರ್ 17): ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜಾನಪದ ಕಲಾವಿದ ಮೈಲಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ವೇಳೆ ಮಹಾಲಿಂಗಪುರ ಪೊಲೀಸರು, ಮೈಲಾರಿಯನ್ನು ಬಂಧಿಸಿದ್ದು, ಸದ್ಯ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇನ್ನು ಮೈಲಾರಿ ಜೈಲಿಗೆ ಹೋಗುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದು, ನನ್ನ ಏಳಿಗೆ ಸಹಿಸಲಾಗದೇ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದರಲ್ಲಿ ಎಷ್ಟೋ ಜನರ ಕೈವಾಡವಿದೆ. ಮ್ಯೂಸಿಕ್ ಮೈಲಾರಿ, ಟ್ರೆಂಡಿಂಗ್ ಸ್ಟಾರ್ ಆಗಬೇಕ ಅಂದ್ರ ಎಷ್ಟು ಕಷ್ಟಪಟ್ಟೀವಿ. ಬಡತನದಿಂದ ಎಷ್ಟು ಸ್ಟ್ರಗಲ್ ಮಾಡಿ ಬಂದೀನಿ ಅದು ನನಗೆ ಗೊತ್ತು. ಸುಮಾರು ಬಾರಿ ನನ್ನ ಮೇಲೆ ಆರೋಪ ಹೊರಿಸುವ ಪ್ರಯತ್ನಗಳು ಆಗಿವೆ. ಕಾನೂನು ಇದೆ. ಕಾನೂನಾತ್ಮಕವಾಗಿ ನಾನು ಹೋರಾಟ ಮಾಡ್ತೇನೆ. ಸಂವಿಧಾನವಿದೆ, ಸಂವಿಧಾನದಲ್ಲಿ ಎಲ್ಲರಿಗೂ ನ್ಯಾಯ ಸಿಗುತ್ತೆ. ನನಗೂ ನ್ಯಾಯ ಸಿಗುತ್ತೆ. ನನ್ನದು ಯಾವುದೇ ರೀತಿಯ ತಪ್ಪಿಲ್ಲ. ಕಾನೂನಿನ ಮೂಲಕ ನಾನು ಹೋರಾಟ ಮಾಡಿ, ತಪ್ಪಿಲ್ಲ ಎಂದು ಸಬೀತು ಮಾಡುತ್ತೇನೆ. ನನ್ನ ಏಳಿಗೆ ಸಹಿಸದವರು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ಮೂಲಕ ತಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದಿದ್ದಾರೆ.

