ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಪುಂಡರನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯದಿಂದ ರೂ. 15,000 ಜಲ್ಮಾನೆ

ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಪುಂಡರನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯದಿಂದ ರೂ. 15,000 ಜಲ್ಮಾನೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 22, 2022 | 12:29 PM

ಪ್ರಕರಣವನ್ನು ದಾಖಲಿಸಿಕೊಂಡಿದ್ದ ಶಿರಾ ತಾಲ್ಲೂಕಿನ ತಾವರೆಕೆರೆ ಠಾಣೆ ಪೊಲೀಸರು ಇವರಿಬ್ಬರನ್ನು ಬಂಧಿಸಿ ಶಿರಾದ ಜೆಎಮ್ ಎಫ್ ಸಿ ಕೋರ್ಟ್​​ ಎದುರು ಹಾಜರುಪಡಿಸಿದ ಬಳಿಕ ಅಲ್ಲಿನ ನ್ಯಾಯಾಧೀಶರು ಅವರ ಮೇಲೆ ರೂ. 15,000 ಗಳ ಜುಲ್ಮಾನೆ ವಿಧಿಸಿದ್ದಾರೆ.

ತುಮಕೂರು:  ಈ ಪಡ್ಡೆಗಳಿಗೆ ಇದೊಂದು ಸಾಹಸ ಅಂತ ಅನಿಸರಬೇಕು. ಆದರೆ ಪೊಲೀಸರು ಮತ್ತು ನ್ಯಾಯಾಲಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ವ್ಹೀಲಿಂಗ್ (wheeling) ಮಾಡುತ್ತಿದ್ದ 21-ವರ್ಷ-ವಯಸ್ಸಿನ ಮೊಹಮ್ಮದ್ ಅಬು ತಾಹಿರ್ (Mohammad Abu Tahir) ಮತ್ತು 20-ವರ್ಷ-ವಯಸ್ಸಿನ ಮೊಹಮ್ಮದ್​ ನವೀದ್​ ಅಬ್ಬಾಸ್​ಗೆ (Mohammad Naveed Abbas) ತಕ್ಕ ಶಾಸ್ತಿ ಮಾಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಶಿರಾ ತಾಲ್ಲೂಕಿನ ತಾವರೆಕೆರೆ ಠಾಣೆ ಪೊಲೀಸರು ಇವರಿಬ್ಬರನ್ನು ಬಂಧಿಸಿ ಶಿರಾದ ಜೆಎಮ್ ಎಫ್ ಸಿ ಕೋರ್ಟ್​​ ಎದುರು ಹಾಜರುಪಡಿಸಿದ ಬಳಿಕ ಅಲ್ಲಿನ ನ್ಯಾಯಾಧೀಶರು ಅವರ ಮೇಲೆ ರೂ. 15,000 ಗಳ ಜುಲ್ಮಾನೆ ವಿಧಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.