ಮೃತ ಗವಿಸಿದ್ದಪ್ಪನ ಕೈಗೆ ರಾಖಿ ಕಟ್ಟಿ ವಿದಾಯ ಹೇಳಿದ ಸಹೋದರಿಯರು
ಗವಿ ಸಿದ್ದಪ್ಪ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಶೋಕದಲ್ಲೂ ಸಹ ಸಹೋದರಿಯರು ಗವಿ ಸಿದ್ದಪ್ಪ ಸಾವಿನಲ್ಲೂ ಸಹೋದರತ್ವ ಬಾಂಧವ್ಯ ಮೆರೆದಿದ್ದಾರೆ. ಹೌದು.. ರಕ್ಷಾ ಬಂಧನ ಹಿನ್ನೆಲೆಯಲ್ಲಿ ಮೃತ ಗವಿಸಿದ್ದಪ್ಪನ ಕೈಗೆ ರಾಖಿ ಕಟ್ಟಿದ್ದಾರೆ. ದುಖದ ನಡುವೆಯೂ ಅಣ್ಣನಿಗೆ ರಾಖಿ ಕಟ್ಟಿ ಸಹೋದರತ್ವ ಬಾಂಧವ್ಯ ಮೆರೆದಿದ್ದಾರೆ.
ಕೊಪ್ಪಳ, (ಆಗಸ್ಟ್ 04): ಅನ್ಯ ಧರ್ಮದ ಯುವತಿಯನ್ನ ಪ್ರೀತಿಸಿದಕ್ಕೆ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಕೊಲೆ (kill) ನಡೆದಿರುವಂತಹ ಘಟನೆ ಭಾನುವಾರ ರಾತ್ರಿ ಕೊಪ್ಪಳ (Koppal) ನಗರದ ವಾರ್ಡ್ 3ರ ಮಸೀದಿ ಮುಂಭಾಗದಲ್ಲಿ ನಡೆದಿದೆ. ಸಾದಿಕ್ ಕೋಲ್ಕಾರ್ ಎಂಬುವನಿಂದ ಗವಿಸಿದ್ದಪ್ಪ ನಾಯಕ್ನ ಕೊಲೆ ಮಾಡಲಾಗಿದೆ. ಸದ್ಯ ಗವಿಸಿದ್ದಪ್ಪ ನಾಯಕ್ ತಂದೆ ನಿಂಗಜ್ಜ ಟಣಕನಲ್ ಅವರು ಆರೋಪಿ ಸಾದಿಕ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ಇನ್ನು ಗವಿ ಸಿದ್ದಪ್ಪ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಶೋಕದಲ್ಲೂ ಸಹ ಸಹೋದರಿಯರು ಗವಿ ಸಿದ್ದಪ್ಪ ಸಾವಿನಲ್ಲೂ ಸಹೋದರತ್ವ ಬಾಂಧವ್ಯ ಮೆರೆದಿದ್ದಾರೆ. ಹೌದು.. ರಕ್ಷಾ ಬಂಧನ ಹಿನ್ನೆಲೆಯಲ್ಲಿ ಮೃತ ಗವಿಸಿದ್ದಪ್ಪನ ಕೈಗೆ ರಾಖಿ ಕಟ್ಟಿದ್ದಾರೆ. ದುಖದ ನಡುವೆಯೂ ಅಣ್ಣನಿಗೆ ರಾಖಿ ಕಟ್ಟಿ ಸಹೋದರತ್ವ ಬಾಂಧವ್ಯ ಮೆರೆದಿದ್ದಾರೆ.
Published on: Aug 04, 2025 04:25 PM