ನಮ್ಮ ಕಣ್ತಪ್ಪಿಸಿ ಮಹಜರು ನಡೆಸಲಾಗುತ್ತಿದೆ: ರೇವಣ್ಣ ಪರ ವಕೀಲ ಆರೋಪ

Updated on: May 06, 2024 | 2:11 PM

ಹೆಚ್​ಡಿ  ರೇವಣ್ಣ(HD Revanna) ಅವರ ನಿವಾಸದಲ್ಲಿ ಮಹಜರು ಪ್ರಕ್ರಿಯೆ ನಡೆಯುತ್ತಿದೆ, ಆದರೆ ವಕೀಲರಾದ ನನ್ನನ್ನೇ ನಿವಾಸದ ಒಳಗೆ ಬಿಡುತ್ತಿಲ್ಲ ಎಂದು ಹೆಚ್​ಡಿ ರೇವಣ್ಣ ಪರ ವಕೀಲ ಗೋಪಾಲ್ ತಿಳಿಸಿದ್ದಾರೆ. ಅಧಿಕಾರಿಗಳು ಮಹಜರು ಪ್ರಕ್ರಿಯೆ ನೋಟಿಸ್ ನನಗೆ ಕೊಟ್ಟಿದ್ದಾರೆ, ಭವಾನಿ ರೇವಣ್ಣ ಅವರಿಗೆ ಮಂಡಿ‌ ಆಪರೇಷನ್ ಆಗಿರುವ ಹಿನ್ನೆಲೆ, ಮಹಜರು ಪ್ರಕ್ರಿಯೆ ನೋಡಿಕೊಳ್ಳಲು ನನಗೆ ಹೇಳಿದ್ದರು ಎಂದರು.

ಹೊಳೆನರಸೀಪುರದ ಮನೆಯಲ್ಲಿ‌ ಮಹಜರು ಪ್ರಕ್ರಿಯೆ ವೇಳೆ ನಾನಿದ್ದೆ, ಬಸವನಗುಡಿ ಮನೆಯಲ್ಲೂ ಮಹಜರು ಮಾಡುತ್ತೇವೆ ಎಂದು ಎಸ್​​ಐಟಿ ಅಧಿಕಾರಿಗಳು ನನಗೆ ನೋಟಿಸ್​ ನೀಡಿದ್ದರು.

ಹಾಗಾಗಿ ಮಹಜರು ಪ್ರಕ್ರಿಯೆಗೆ ಸಹಕರಿಸಲು ನಾನು ಬಂದಿದ್ದೆ, ಆದರೆ ಹೆಚ್​.ಡಿ.ರೇವಣ್ಣ ನಿವಾಸದೊಳಗೆ ನಮ್ಮನ್ನು ಬಿಟ್ಟಿಲ್ಲ ಎಂದು ಗೋಪಾಲ್ ಹೇಳಿದ್ದಾರೆ. ಬಸವನಗುಡಿ ನಿವಾಸದ ಬಳಿ ರೇವಣ್ಣ ಪರ ವಕೀಲರು ಹೇಳಿಕೆ ನೀಡಿದ್ದಾರೆ.

ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಹೆಚ್​ಡಿ ರೇವಣ್ಣ ಪುತ್ರ ಪ್ರಜ್ವಲ್​ ರೇವಣ್ಣ ವಿರುದ್ಧ ಲುಕ್​ ಔಟ್​ ನೋಟಿಸ್ ಹೊರಡಿಸಲಾಗಿದೆ. ಹಾಗೆಯೇ ಮಹಿಳೆಯ ಅಪಹರಣಕ್ಕೆ ಸಂಬಂಧಿಸಿದಂತೆ ಹೆಚ್​ಡಿ ರೇವಣ್ಣ ಅವರನ್ನು ಎಸ್​ಐಟಿ ಬಂಧಿಸಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: May 06, 2024 02:10 PM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More