ಒಂದೇ ಒಂದು ಅವಕಾಶ ಕೊಡಿ ಎಂದು ಪೊಲೀಸರ ಬಳಿ ಬೇಡಿಕೆ ಇಟ್ಟ ಪ್ರಜ್ವಲ್ ರೇವಣ್ಣ!

| Updated By: ರಮೇಶ್ ಬಿ. ಜವಳಗೇರಾ

Updated on: Jun 21, 2024 | 9:57 PM

ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಪ್ರಜ್ವಲ್‌ ರೇವಣ್ಣನನ್ನು ಹಾಸನಕ್ಕೆ ಕರೆದೊಯ್ದು ವೇಳೆ ಪೊಲೀಸರ ಬಳಿ ಬೇಡಿಕೆ ಇಟ್ಟ ಘಟನೆ ನಡೆದಿದೆ. ಆದ್ರೆ, ಪೊಲೀಸರು ಪ್ರಜ್ವಲ್ ನನ್ನ ಕವರ್ ಮಾಡಿ ಪೊಲೀಸ್​ ಜೀಪ್ ಹತ್ತಿಸಿದ್ದಾರೆ.

ಹಾಸನ (ಜೂ.21): ಅತ್ಯಾಚಾರ ಆರೋಪದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನನ್ನು ಪೊಲೀಸರು ಹಾಸನಕ್ಕೆ ಕರೆದೊಯ್ದು ಸ್ಥಳ ಮಹಜರ್ ನಡೆಸಿದರು. ಈ ವೇಳೆ ಪ್ರಜ್ವಲ್ ಅಧಿಕಾರಿಗಳೆದುರು ಒಂದು ಬೇಡಿಕೆ ಇಟ್ಟರು. ಮಾಧ್ಯಮಗಳಿಗೆ ಹೇಳಿಕೆ ನೀಡಲು ಒಂದು ಅವಕಾಶ ಮಾಡಿ ಕೊಡಿ ಎಂದು ಪ್ರಜ್ವಲ್ ರೇವಣ್ಣ ಮನವಿ ಮಾಡಿಕೊಂಡರು. ಒಂದು ನಿಮಿಷ ಸಮಯ ಕೊಡಿ ಮೀಡಿಯಾ ಜೊತೆ ಮಾತಾಡಿ ಬರ್ತೆನೆ ಎಂದು ಸಂಸದರ ನಿವಾಸದಿಂದ ಹೊರ ಬರಲು ಯತ್ನಿಸಿದ್ದರಂತೆ, ಈ ಬೇಡಿಕೆಗೆ ಎಸ್ ಐ ಟಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ನೀವು ಆರೋಪಿ ಯಾವುದೇ ಕಾರಣದಿಂದ ಮಾಧ್ಯಮಗಳ ಎದುರು ಹೋಗೋ ಹಾಗಿಲ್ಲ ಎಂದು ತಡೆದರು

ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಮೇಲಿನ ಆರೋಪ ಸುಳ್ಳು ಎಂದು , ಮಾಧ್ಯಮಗಳ ಎದುರು ಮಾತನಾಡಲು ಯತ್ನಿಸಿದ ಹಿನ್ನೆಲೆಯಲ್ಲಿ ಪ್ರಜ್ವಲ್ ರನ್ನ ಕವರ್ ಮಾಡಿ ಪೊಲೀಸರು ಜೀಪ್ ಹತ್ತಿಸಿದರು. ಸ್ಥಳ ಮಹಜರು ನಡೆಸಿದ ಬಳಿಕ ಈ ಘಟನೆ ನಡೆದಿದ್ದು, ಸರ್ಪಗಾವಲಿನಲ್ಲಿ ಪೋಲೀಸರು ಕರೆದೊಯ್ದರು.