ಅಶ್ಲೀಲ ವಿಡಿಯೋ ಹಂಚಿದವನನ್ನು ಎಸ್ಐಟಿ ತಂಡ ಇದುವರೆಗೆ ಮುಟ್ಟೇ ಇಲ್ಲ: ದೇವರಾಜೇಗೌಡ, ವಕೀಲ

|

Updated on: May 06, 2024 | 7:56 PM

ಈ ಪ್ರಕರಣದಲ್ಲಿ ಡ್ರೈವರ್ ಕಾರ್ತೀಕ್ ವಿರುದ್ಧ ಎಫ್ಐಆರ್ ಆಗಿದ್ದರೂ ಎಸ್ಐಟಿ ತಂಡ ಇದುವರೆಗೆ ಅವನ ವಿಚಾರಣೆ ನಡೆಸಿಲ್ಲ ಎಂದು ವಕೀಲ ಹೇಳಿದರು. ಮೂರು ದಿನ ಮೊದಲು ಅವರು, ಎಸ್ಐಟಿ ತನಿಖೆ ಸರಿಯಾದ ನಿಟ್ಟಿನಲ್ಲಿ ಸಾಗಿದೆ ಮತ್ತು ತಾನು ಸಂತುಷ್ಟನಾಗಿದ್ದೇನೆ ಎಂದಿದ್ದರು. ಈಗ ಅವರು ವಿಡಿಯೋಗಳನ್ನು ಬಿಡುಗಡೆ ಮಾಡಿದ ವ್ಯಕ್ತಿಯನ್ನು ಎಸ್ಐಟಿ ಮುಟ್ಟೇ ಇಲ್ಲ ಅನ್ನುತ್ತಾರೆ.

ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋಗಳ ಪ್ರಕರಣಲ್ಲಿ ಹಾಸನದ ವಕೀಲ ದೇವರಾಜೇಗೌಡರ (Devarajegowda) ಪಾತ್ರ ಮತ್ತು ಉದ್ದೇಶವೇನು ಅಂತ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಅವರು ಯಾರ ಪರ ಇದ್ದಾರೋ ಅವರ ವಿರೋಧಿಗಳು ಯಾರೋ ಅನ್ನೋದು ಅವರ ಮಾತುಗಳಿಂದ ಗೊತ್ತಾಗಲ್ಲ. ಮೊನ್ನೆ ಟಿವಿ9 ಸ್ಟುಡಿಯೋದಲ್ಲಿ ಮಾತಾಡುವಾಗ ಅವರು ಡಿಕೆ ಶಿವಕುಮಾರ್ (DK Shivakumar) ಬಗ್ಗೆ ಏನೂ ಹೇಳಲಿಲ್ಲ. ಈಗ ಅವರು ಇಡೀ ಪ್ರಕರಣದ ರೂವಾರಿಯೇ ಶಿವಕುಮಾರ್ ಅನ್ನುತ್ತಿದ್ದಾರೆ. ನಗರದ ಪ್ರೆಸ್ ಕ್ಲಬ್ ನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ದೇವರಾಜೇಗೌಡ ಹಲವಾರು ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಲಿಲ್ಲ. ಅಶ್ಲೀಲ ವಿಡಿಯೋಗಳ ಸಂಖ್ಯೆಯ ಬಗ್ಗೆ ಹೇಳಿದ ಅವರು 2,296 ಫೋಲ್ಡರ್ ಗಳಿವೆ ಎಂದರು. ಈ ಪ್ರಕರಣದಲ್ಲಿ ಡ್ರೈವರ್ ಕಾರ್ತೀಕ್ ವಿರುದ್ಧ ಎಫ್ಐಆರ್ ಆಗಿದ್ದರೂ ಎಸ್ಐಟಿ ತಂಡ ಇದುವರೆಗೆ ಅವನ ವಿಚಾರಣೆ ನಡೆಸಿಲ್ಲ ಎಂದು ವಕೀಲ ಹೇಳಿದರು. ಮೂರು ದಿನ ಮೊದಲು ಅವರು, ಎಸ್ಐಟಿ ತನಿಖೆ ಸರಿಯಾದ ನಿಟ್ಟಿನಲ್ಲಿ ಸಾಗಿದೆ ಮತ್ತು ತಾನು ಸಂತುಷ್ಟನಾಗಿದ್ದೇನೆ ಎಂದಿದ್ದರು. ಈಗ ಅವರು ವಿಡಿಯೋಗಳನ್ನು ಬಿಡುಗಡೆ ಮಾಡಿದ ವ್ಯಕ್ತಿಯನ್ನು ಎಸ್ಐಟಿ ಮುಟ್ಟೇ ಇಲ್ಲ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ದೇವರಾಜೇಗೌಡ 2 ವರ್ಷಗಳಿಂದ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೂ ರೇವಣ್ಣ ಕುಟುಂಬ ಕತ್ತೆ ಕಾಯ್ತಿತ್ತಾ? ಶಿವರಾಮೇಗೌಡ