ದೇವರಾಜೇಗೌಡರ ಪ್ರಕಾರ ಪೆನ್ ಡ್ರೈವ್ ಕೇಸಲ್ಲಿ ಕಾಂಗ್ರೆಸ್ ಟಾರ್ಗೆಟ್ ಯಾರು ಗೊತ್ತಾ?
Prajwal Revanna pen drive case: ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣ ಸಂಬಂಧ ಹಾಸನ ಬಿಜೆಪಿ ನಾಯಕ ಹಾಗೂ ವಕೀಲ ದೇವರಾಜೇಗೌಡ ಸುದ್ದಿಗೋಷ್ಠಿ ನಡೆಸಿ ಒಂದಷ್ಟು ಮಾಹಿತಿ ಹೊರಹಾಕಿದ್ದಾರೆ. ಪೆನ್ ಡ್ರೈವ್ ಕೇಸ್ನ ರೂವಾರಿಯೇ ಕಾಂಗ್ರೆಸ್ ಪಕ್ಷ. ಪೆನ್ ಡ್ರೈವ್ನಲ್ಲಿರುವ ವಿಡಿಯೋಗಳನ್ನು ಲೀಕ್ ಮಾಡಿ ಹಲವರ ಮಾನ ಹರಾಜು ಮಾಡಿದೆ ಕಾಂಗ್ರೆಸ್. ಅಲ್ಲದೇ ಈ ಕೇಸ್ ಬಳಸಿ ಯಾರಾರನ್ನು ಫಿಟ್ ಮಾಡಿ ಮಟ್ಟ ಹಾಕಬೇಕೆಂದೂ ಕಾಂಗ್ರೆಸ್ ಪ್ಲಾನ್ ಮಾಡಿದೆ ಎನ್ನುವಂತಹ ಸಂಗತಿಯನ್ನು ದೇವರಾಜೇಗೌಡರು ತಿಳಿಸಿದ್ದಾರೆ.
ಹಾಸನ, ಮೇ 6: ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಪ್ರಕರಣದಲ್ಲಿ ಬಿಜೆಪಿ ನಾಯಕ ಹಾಗು ವಕೀಲ ದೇವರಾಜೇಗೌಡ (Devaraje Gowda) ಅವರು ಸುದ್ದಿಗೋಷ್ಠಿ ನಡೆಸಿ ಹಲವು ಮಹತ್ವದ ವಿಚಾರಗಳನ್ನು ಹೊರಹಾಕಿದ್ದಾರೆ. ಈ ಪೆನ್ ಡ್ರೈವ್ ಕೇಸ್ನಲ್ಲಿ ಕಾಂಗ್ರೆಸ್ ಪಕ್ಷವೇ ಸೂತ್ರಧಾರಿ ಎಂದು ಆರೋಪಿಸಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಅವರು ನೇರಾ ಆರೋಪ ಮಾಡಿದ್ದಾರೆ. ಡಿಕೆಶಿ ಮಾತ್ರವಲ್ಲ ಸಿದ್ದರಾಮಯ್ಯ ಕೂಡ ಈ ಆಟದಲ್ಲಿ ಇದ್ದಾರೆ. ಎಲ್ ಆರ್ ಶಿವರಾಮೇಗೌಡ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ ಎಂದು ಹೊಳೆನರಸೀಪುರದಲ್ಲಿ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿದ್ದ ದೇವರಾಜೇಗೌಡರು ತಿಳಿಸಿದ್ದಾರೆ.
ಎಸ್ಐಟಿ ತನಿಖೆ ಮೂಲಕ ಕೇಸ್ನಲ್ಲಿ ಯಾರಾರನ್ನು ಫಿಟ್ ಮಾಡಬೇಕು ಎಲ್ಲವನ್ನೂ ಯೋಜಿಸಿದ್ದಾರೆ. ಎಚ್.ಡಿ. ರೇವಣ್ಣ ಅವರನ್ನು ಮುಗಿಸಿದ್ದಾಯಿತು. ಇವರ ಮುಖ್ಯ ಟಾರ್ಗೆಟ್ ನರೇಂದ್ರ ಮೋದಿ. ಹೇಗಾದರೂ ಮಾಡಿ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆ ಬರುವಂತೆ ಮಾಡುವುದು ಇವರ ತಂತ್ರ. ಬಿಜೆಪಿ ಜೊತೆ ಇರುವ ಕುಮಾರಸ್ವಾಮಿಯೂ ಇವರ ಟಾರ್ಗೆಟ್. ಅದೇನಾದರೂ ಆಗಲಿ ಆದರೆ, ಎಲ್ಲಾ ಸಾಕ್ಷ್ಯ ಕೊಟ್ಟ ನನ್ನನ್ನೇ ಕೇಸ್ನಲ್ಲಿ ಎ1 ಆರೋಪಿ ಮಾಡೋಕೆ ನೋಡಿದ್ರು. ವಕೀಲನಾಗಿ ನಾನು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ ಎಂದು ದೇವರಾಜೇಗೌಡ ವಿವರಿಸಿದ್ದಾರೆ.
ಇದನ್ನೂ ಓದಿ: ಆತುರದಲ್ಲಿ ನಿರ್ಧಾರ ತಗೋಬೇಡಿ ಅಂತ ಹೇಳಿದರೂ ಈಶ್ವರಪ್ಪ ದುಡುಕಿಬಿಟ್ಟರು: ಎಂಟಿಬಿ ನಾಗರಾಜ್, ಮಾಜಿ ಸಚಿವ
ಇನ್ನು, ಸಂತ್ರಸ್ತೆಗೆ ಕಾಂಗ್ರೆಸ್ ಪಕ್ಷದವರು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ. ಬೇಲೂರಿನ ಅರೇಹಳ್ಳಿಗೆ ಯಾರು ಹೋಗಿದ್ರು, ಎಷ್ಟು ಗಾಡಿ ಹೋಗಿತ್ತು, ಯಾರನ್ನು ಕರಕೊಂಡು ಬಂದ್ರು ಇವೆಲ್ಲವನ್ನೂ ವಿಚಾರಿಸಿ. ಹಾಸನದಲ್ಲಿ ಸ್ಕೈ ಬರ್ಡ್ ಹೋಟೆಲ್ನಲ್ಲಿ ಸಂತ್ರಸ್ತೆ ಮಹಿಳೆ ಜೊತೆ ಶ್ರೇಯಸ್ ಪಟೇಲ್ ಎಷ್ಟು ಹೊತ್ತು ಮಾತನಾಡಿದ್ದಾರೆ ಎಂಬುದೆಲ್ಲ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ ನೋಡಿ ಎಂದಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ