ಶ್ರೀಲಂಕಾದಲ್ಲಿ ಸ್ಥಿತಿ ಮತ್ತಷ್ಟು ಉದ್ವಿಗ್ನ, ಅಧ್ಯಕ್ಷರ ನಿವಾಸಕ್ಕೆ ಜನರ ಮುತ್ತಿಗೆ, ಗೊಟಬಯ ರಾಜಪಕ್ಸ ದೇಶದಿಂದ ಪರಾರಿ?

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 09, 2022 | 4:42 PM

ಸಾವಿರಾರು ಜನ ಸೇರಿದ್ದಾರೆ ಮತ್ತು ಸರ್ಕಾರ ಹಾಗೂ ಗೊಟಬಯ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಜನರನ್ನು ನಿಯಂತ್ರಿಸುವುದು ಸೇನೆ ಮತ್ತು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.

ನೆರೆರಾಷ್ಟ್ರ ಶ್ರೀಲಂಕಾದಲ್ಲಿ (Sri Lanka) ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಮತ್ತು ಅರಾಜಕತೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ರೊಚ್ಚಿಗೆದ್ದಿರುವ ಜನ ಶನಿವಾರದಂದು ಅಧ್ಯಕ್ಷ ಗೊಟಬಯ ರಾಜಪಕ್ಸ (Gotabaya Rajapaksa) ಅವರ ಅರಮನೆಯಂಥ ಬಂಗ್ಲೆಗೆ ಮುತ್ತಿಗೆ ಹಾಕಿದರು. ಹಾಕುವುದಷ್ಟೇ ಅಲ್ಲ ಒಳನುಗ್ಗಿ ಮಹಡಿ ಮೇಲೆ ಹತ್ತಿದರು ಮತ್ತು ಈಜುಕೊಳಕ್ಕೆ (swimming pool) ಇಳಿದು ಪ್ರತಿಭಟಿಸಿದರು. ಅಷ್ಟರಲ್ಲಾಗಲೇ ಗೊಟಬಯ ತಮ್ಮ ನಿವಾಸದಿಂದ ಪರಾರಿಯಾಗಿದ್ದರು. ಅವರ ನಿವಾಸಕ್ಕೆ ನುಗ್ಗಿರುವ ಜನರ ಸಂಖ್ಯೆ ನೋಡಿ ಮಾರಾಯ್ರೇ. ಸಾವಿರಾರು ಜನ ಸೇರಿದ್ದಾರೆ ಮತ್ತು ಸರ್ಕಾರ ಹಾಗೂ ಗೊಟಬಯ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಜನರನ್ನು ನಿಯಂತ್ರಿಸುವುದು ಸೇನೆ ಮತ್ತು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ:  Viral Video: ಇಂಗ್ಲೆಂಡ್ ರಾಜಕೀಯ ಬಿಕ್ಕಟ್ಟು: ನೇರಪ್ರಸಾರದ ವೇಳೆ ಮೇಜಿನ ಮೇಲೆ ಕಾಲಿಟ್ಟು ಆರಾಮವಾಗಿ ಕುಳಿತ ಟಿವಿ ನಿರೂಪಕನ ವಿಡಿಯೋ ವೈರಲ್