ದರ್ಶನ್ ಚುನಾವಣಾ ಪ್ರಚಾರ: ಮಳವಳ್ಳಿ ಭಾಗದಲ್ಲಿ ಜೋರು ಮಳೆ, ತೋಯಿಸಿಕೊಳ್ಳುತ್ತಾ ಭಾಷಣ ಕೇಳಿದ ಜನ!
ಕಳೆದ ವರ್ಷ ಕೊರತೆ ಮಳೆಯಿಂದಾಗಿ ಇಡೀ ರಾಜ್ಯದ ಜನ ಕುಗ್ಗಿಹೋಗಿದ್ದಾರೆ, ಅನೇಜ ಕಡೆ ಕುಡಿಯಲು ನೀರಿಲ್ಲ, ಹಸು ಕರುಗಳು ನೀರಿಗಾಗಿ ಹಪಹಪಿಸುವ ದೃಶ್ಯಗಳನ್ನು ನಾವು ನೋಡುತ್ತಿರುತ್ತೇವೆ. ಬೆಳೆಗಳು ಸಂಪರ್ಣ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮಳೆ ಸುರಿಯಲಾರಂಭಿಸಿದರೆ ಜನಕ್ಕೆ ರೋಮಾಂಚನವಾಗದಿರುತ್ತದೆಯೇ?
ಮಂಡ್ಯ: ಮಳೆ ನೀಡುವ ಸಂತಸ ಮತ್ತು ಅದು ಹೊತ್ತು ತರುವ ಸಂಭ್ರಮವೇ ಹಾಗೆ ಮಾರಾಯ್ರೇ. ಜಿಲ್ಲೆಯ ಕೃಷ್ಣಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಜನ ದಿ ಬಾಸ್ (the Boss) ಬಂದ್ರು ನಮ್ಮೂರಲ್ಲಿ ಮಳೆ ಸುರಿಯಿತು ಅಂತ ಖುಷಿಪಟ್ಟಿರಲಿಕ್ಕೂ ಸಾಕು. ಚಿತ್ರನಟ ದರ್ಶನ್ (actor Darshan) ಇವತ್ತು ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೆಗೌಡ (ಸ್ಟಾರ್ ಚಂದ್ರು) (Star Chandru) ಪರ ಭರ್ಜರಿಯಾಗಿ ಪ್ರಚಾರ ಮಾಡುತ್ತ್ತಿದ್ದಾಗ ಮಳೆ ಸುರಿಯಿತು. ಮಳೆಯಿಂದ ರಕ್ಷಣೆ ಪಡೆಯಲು ಜನ ಓಡಿ ಹೋಗಿ ಮರ ಅಥವಾ ಅಂಗಡಿ ಮುಂಗಟ್ಟುಗಳ ಆಶ್ರಯ ಪಡೆಯುವ ಪ್ರಯತ್ನ ಮಾಡಲಿಲ್ಲ. ದರ್ಶನ್ ಅವರನ್ನು ನೋಡುವ ಮತ್ತು ಅವರ ಮಾತು ಕೇಳಿಸಿಕೊಳ್ಳುವ ಜೊತೆಗೆ ಬಿರು ಬೇಸಿಗೆಯ ನಡುವೆ ಮಳೆಯಲ್ಲಿ ನೆನೆಯುವ ಉಮೇದಿ ಅವರಿಗೆ! ಕಳೆದ ವರ್ಷ ಕೊರತೆ ಮಳೆಯಿಂದಾಗಿ ಇಡೀ ರಾಜ್ಯದ ಜನ ಕುಗ್ಗಿಹೋಗಿದ್ದಾರೆ, ಅನೇಜ ಕಡೆ ಕುಡಿಯಲು ನೀರಿಲ್ಲ, ಹಸು ಕರುಗಳು ನೀರಿಗಾಗಿ ಹಪಹಪಿಸುವ ದೃಶ್ಯಗಳನ್ನು ನಾವು ನೋಡುತ್ತಿರುತ್ತೇವೆ. ಬೆಳೆಗಳು ಸಂಪರ್ಣ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮಳೆ ಸುರಿಯಲಾರಂಭಿಸಿದರೆ ಜನಕ್ಕೆ ರೋಮಾಂಚನವಾಗದಿರುತ್ತದೆಯೇ? ಆ ಸಂತಸ ಮತ್ತು ಸಂಭ್ರಮವನ್ನು ಮಳೆಯಲ್ಲೂ ದರ್ಶನ್ ಮಾತುಗಳನ್ನು ಕೇಳಿಸಿಕೊಳ್ಳುವ ಮಂಡ್ಯ ಜನರ ಮೊಗದಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ಏನೇನೋ ಅಂದ್ಕೊಬೇಡಿ’; ಮಂಡ್ಯದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ದರ್ಶನ್ ಸ್ಪಷ್ಟನೆ