ತುಂಗಾಭದ್ರಾ ಗೇಟ್ ದುರಸ್ತಿಗೆ ಅಡ್ಡಿಯಾಗಿದ್ದ ಸ್ಕೈವಾಕ್ ತೆರವು ಯಶಸ್ವಿ, ರೋಚಕ ದೃಶ್ಯ ಇಲ್ಲಿದೆ ನೋಡಿ
ಮೊದಲ ಎಲಿಮೆಂಟ್ ಅಳವಡಿಕೆ ಕಾರ್ಯ ಆರಂಭವಾಗಿಲ್ಲ. ಬದಲಿಗೆ ಮೊದಲ ಎಲಿಮೆಂಟ್ ಅಳವಡಿಕೆಗೆ ಅಡ್ಡಿಯಾಗಿದ್ದ ಕೆಲ ತಡೆಗಳನ್ನು ತೆರವು ಮಾಡಲಾಗಿದೆ. ಇನ್ನು ಕ್ರಸ್ಟ್ಗೇಟ್ ವೇಲಿದ್ದ ಸ್ಕೈವಾಕ್ ತೆರವುಗೊಳಿಸಿದ ರೋಚಕ ದೃಶ್ಯ ಇಲ್ಲಿದೆ ನೋಡಿ.
ವಿಜಯನಗರ, (ಆಗಸ್ಟ್ 16): ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಆರು ದಿನಗಳಾಗಿದ್ದು, ತಾತ್ಕಾಲಿಕ ಗೇಟ್ ಕೂರಿಸುವ ಕಾರ್ಯ ಭರದಿಂದ ಸಾಗಿದೆ. ಆದ್ರೆ, ಮೊದಲ ಎಲಿಮೆಂಟ್ ಅಳವಡಿಕೆ ಕಾರ್ಯ ಆರಂಭವಾಗಿಲ್ಲ. ಬದಲಿಗೆ ಮೊದಲ ಎಲಿಮೆಂಟ್ ಅಳವಡಿಕೆಗೆ ಅಡ್ಡಿಯಾಗಿದ್ದ ಕೆಲ ತಡೆಗಳನ್ನು ತೆರವು ಮಾಡಲಾಗಿದೆ. ಹೌದು.. ಇಂದು (ಆಗಸ್ಟ್ 16) ಬೆಳಗ್ಗೆಯಿಂದ ಕೌಂಟರ್ ಪಾರ್ಟ್ ಕಬ್ಬಿಣದ ಪಟ್ಟಿ ಮಾತ್ರ ತೆರವು ಮಾಡಲಾಗಿದ್ದು, ಮೊದಲ ಎಲಿಮೆಂಟ್ ಅಳವಡಿಸಲು ಸಿಬ್ಬಂದಿ ತಯಾರಿ ನಡೆಸಿದ್ದಾರೆ. ರಾತ್ರಿಯಾದರೂ ಸಹ ಲೈಟ್ ವ್ಯವಸ್ಥೆ ಮಾಡಿಕೊಂಡು ಸಿಬ್ಬಂದಿ ಗೇಟ್ ದುರಸ್ತಿ ಕೆಲಸ ಮಾಡುತ್ತಿದ್ದಾರೆ. ಇನ್ನು ಸ್ಥಳದಲ್ಲೇ ಸಚಿವ ಶಿವರಾಜ್ ತಂಗಡಗಿ ಬೀಡುಬಿಟ್ಟು ದುರಸ್ತಿ ಕಾರ್ಯ ವೀಕ್ಷಣೆ ಮಾಡುತ್ತಿದ್ದಾರೆ. ಇನ್ನು ಕ್ರಸ್ಟ್ಗೇಟ್ ವೇಲಿದ್ದ ಸ್ಕೈವಾಕ್ ತೆರವುಗೊಳಿಸಿದ ರೋಚಕ ದೃಶ್ಯ ಇಲ್ಲಿದೆ ನೋಡಿ.