ಪ್ರವೀಣ್ ನೆಟ್ಟಾರು ಸಾಕಿದ ನಾಯಿಗಳು ಅಗಲಿದ ಯಜಮಾನನ್ನು ನೆನೆದು ರೋದಿಸುತ್ತಿವೆ

ಪ್ರವೀಣ್ ನೆಟ್ಟಾರು ಸಾಕಿದ ನಾಯಿಗಳು ಅಗಲಿದ ಯಜಮಾನನ್ನು ನೆನೆದು ರೋದಿಸುತ್ತಿವೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 28, 2022 | 12:52 PM

ಈ ಮೂಕಪ್ರಾಣಿಗಳಿಗೆ ಅವರು ಸಾವನ್ನಪ್ಪಿರುವುದು ಗೊತ್ತಾಗಿ ಶೋಕತಪ್ತಗೊಂಡಿವೆ ಮತ್ತು ಕಪ್ಪು ನಾಯಿ ಕಣ್ಣೀರು ಸುರಿಸಿರುವುದನ್ನು ಕಾಣಬಹುದು. ನಿಸ್ಸಂದೇಹವಾಗಿ ಅವುಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ.

ದಕ್ಷಿಣ ಕನ್ನಡ: ದುಷ್ಕರ್ಮಿಗಳಿಂದ ಮಂಗಳವಾರ ಹತ್ಯೆಗೈಯಲ್ಪಟ್ಟ ಪ್ರವೀಣ್ ನೆಟ್ಟಾರು (Praveen Nettaru) ಅವರಿಗೆ ನಾಯಿಗಳ ಮೇಲೆ ವಿಶೇಷ ಮಮತೆ ಇತ್ತು ಎಂದು ಅವರ ಆಪ್ತರು ಹೇಳುತ್ತಿದ್ದಾರೆ. ಬೀದಿಗಳಲ್ಲಿ ಅದರಲ್ಲೂ ಅನಾಥವಾಗಿರುತ್ತಿದ್ದ ಚಿಕ್ಕ ಮರಿಗಳನ್ನು (puppies) ಅವರು ಮನೆಗೆ ತಂದು ಸಾಕುತ್ತಿದ್ದರಂತೆ. ಇಲ್ಲಿರುವ ಈ ಮೂಕಪ್ರಾಣಿಗಳಿಗೆ ಅವರು ಸಾವನ್ನಪ್ಪಿರುವುದು ಗೊತ್ತಾಗಿ ಶೋಕತಪ್ತಗೊಂಡಿವೆ ಮತ್ತು ಕಪ್ಪು ನಾಯಿ ಕಣ್ಣೀರು ಸುರಿಸಿರುವುದನ್ನು ಕಾಣಬಹುದು. ನಿಸ್ಸಂದೇಹವಾಗಿ ಅವುಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ.