ಚಿರತೆ, ಹುಲಿಗಳ ನಂತರ ಕಾಡುಪಾಪದಂಥ ನಿರುಪದ್ರವಿ ಜೀವಿಗಳು ಜನವಸತಿ ಪ್ರದೇಶಕ್ಕೆ ಬರಲಾರಂಭಿಸಿವೆ!
ಹಾವು ಹಿಡಿಯುವುದರಲ್ಲಿ ಪರಿಣಿತರಾಗಿರುವ ದಿಲಿಪ್ ಬಹಳ ನಾಜೂಕಿನಿಂದ ಕಾಡುಪಾಪಗೆ ಸ್ವಲ್ಪವೂ ಗಾಯವಾಗದಂತೆ ಮರದಿಂದ ಕೆಳಗಿಳಿಸಿದ್ದಾರೆ. ನಂತರ ಅದನ್ನು ದೇವರಾಯದುರ್ಗದ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಒಂದು ಮರದ ಮೇಲೆ ಬಿಟ್ಟಿದ್ದಾರೆ.
ಆನೆ ಚಿರತೆ ಮತ್ತು ಹುಲಿಗಳಂಥ ಭಯಾನಕ ಪ್ರಾಣಿಗಳ ನಂತರ ಜನವಸತಿ ಪ್ರದೇಶಗಳಿಗೆ ಲಗ್ಗೆಯಿಡುವ ಸರದಿ ಕಾಡುಪಾಪಗಳದ್ದು ಅನಿಸುತ್ತೆ. ಕಾಡುಪಾಪ (slender lorris) ಬಂದರೂ ಭಯವಿಲ್ಲ ಬಿಡಿ ಮಾರಾಯ್ರೇ, ಅದು ಪುಟ್ಟ ನಿರುಪದ್ರವಿ ಜೀವಿ. ಇದು ಕರ್ನಾಟಕದ ಮೈಸೂರು ಭಾಗದಲ್ಲಿರುವ ಪಶ್ಚಿಮಘಟ್ಟಗಳು, ತಮಿಳುನಾಡು ಮತ್ತು ಆಂಧ್ರಪ್ರದೇಶದ ಕಾಡುಪ್ರದೇಶಗಳ ಮರಗಳ ಮೇಲೆ ವಿರಳವಾಗಿ ಕಾಣಿಸಿಕೊಳ್ಳುವ ಪ್ರಾಣಿಯಾಗಿದೆ. ಇದನ್ನು ವಿನಾಶದ ಅಂಚಿನಲ್ಲಿರುವ ಪ್ರಾಣಿಗಳ ಗುಂಪಿಗೆ ಸೇರಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ ಒಂದು ಬೂದು ಬಣ್ಣದ ಕಾಡುಪಾದ ಅದ್ಹೇಗೋ ತುಮಕೂರು ಜಿಲ್ಲೆಯ ರಂಗಾಪುರಕ್ಕೆ ಬಂದು ಬಿಟ್ಟಿದೆ. ಕಾರ್ಖನೆಯೊಂದರ ಉದ್ಯೋಗಿಗಳಿಗೆ ಅಲ್ಲಿ ಕ್ವಾರ್ಟರ್ಸ್ ನಿರ್ಮಿಸಲಾಗಿದೆ.
ಅಲ್ಲಿನ ನಿವಾಸಿಗಳ ಪೈಕಿ ಯಾರೋ ಮರದ ಮೇಲೆ ಕೂತಿದ್ದ ಕಾಡುಪಾಪವನ್ನು ಗಮನಿಸಿದ್ದಾರೆ. ಅದೇನು ಅಂತ ಪ್ರಾಯಶಃ ಅವರಿಗೆ ಗೊತ್ತಾಗಿರಲಿಕ್ಕಿಲ್ಲ. ಅದರ ರೂಪ ಕಂಡು ಅವರು ಹೆದರಿರುವ ಸಾಧ್ಯತೆಯೂ ಇದೆ.
ಅದನ್ನು ತಡವುವ ಗೋಜಿಗೆ ಹೋಗದೆ ಅವರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಫಾರೆಸ್ಟ್ ಗಾರ್ಡ್ ಒಬ್ಬರು ಆ ಭಾಗದ ಉರಗ ತಜ್ಞ ದಿಲಿಪ್ ಎನ್ನುವವರೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ.
ಹಾವು ಹಿಡಿಯುವುದರಲ್ಲಿ ಪರಿಣಿತರಾಗಿರುವ ದಿಲಿಪ್ ಬಹಳ ನಾಜೂಕಿನಿಂದ ಕಾಡುಪಾಪಗೆ ಸ್ವಲ್ಪವೂ ಗಾಯವಾಗದಂತೆ ಮರದಿಂದ ಕೆಳಗಿಳಿಸಿದ್ದಾರೆ. ನಂತರ ಅದನ್ನು ದೇವರಾಯದುರ್ಗದ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಒಂದು ಮರದ ಮೇಲೆ ಬಿಟ್ಟಿದ್ದಾರೆ.
ಇದನ್ನೂ ಓದಿ: ತನಗೇ ವೋಟ್ ಹಾಕಬೇಕೆಂದು ಮತದಾರರಿಂದ ಆಣೆ ಪ್ರಮಾಣ ಮಾಡಿಸಿದ ರೇಣುಕಾಚಾರ್ಯ; ವೈರಲ್ ಆದ ವಿಡಿಯೋ ಇಲ್ಲಿದೆ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

