ಪ್ರಧಾನಿ ಮೋದಿ ಕೊಟ್ಟ ಬಿಹಾರದ ಠೇಕುವಾ ಸ್ವೀಟ್ ಸವಿದ ಸ್ಲೋವಾಕಿಯಾ ನಾಯಕ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ ತಿಂಗಳಲ್ಲಿ ಸ್ಲೋವಾಕಿಯಾ ಪ್ರವಾಸಕ್ಕೆ ತೆರಳಿದ್ದಾಗ ರಿಚರ್ಡ್ ಅವರಿಗೆ ಬಿಹಾರದ ಸಾಂಪ್ರದಾಯಿಕ ಸಿಹಿ ತಿಂಡಿಯಾದ ‘ಠೇಕುವಾ’ (Thekua) ಅನ್ನು ಉಡುಗೊರೆಯಾಗಿ ನೀಡಿದ್ದರು. ಆ ಸುಂದರ ಉಡುಗೊರೆಯ ಬಾಕ್ಸ್ ಅನ್ನು ಓಪನ್ ಮಾಡಿದ ರಿಚರ್ಡ್ ಆ ಸಿಹಿಯನ್ನು ಸವಿದು ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಠೇಕುವಾ ಎಂಬ ಸಿಹಿತಿಂಡಿಯನ್ನು ಬಿಹಾರ ಮತ್ತು ಉತ್ತರ ಭಾರತದ ಪ್ರಸಿದ್ಧ ಹಬ್ಬವಾದ 'ಛತ್ ಪೂಜೆ'ಯ ಸಂದರ್ಭದಲ್ಲಿ ವಿಶೇಷವಾಗಿ ಪ್ರಸಾದದ ರೂಪದಲ್ಲಿ ತಯಾರಿಸಲಾಗುತ್ತದೆ.
ಬ್ರಾಟಿಸ್ಲಾವಾ, ಜುಲೈ 14: ಸ್ಲೋವಾಕಿಯಾ ಗಣರಾಜ್ಯದ ರಾಷ್ಟ್ರೀಯ ಮಂಡಳಿಯ ಸ್ಪೀಕರ್ ರಿಚರ್ಡ್ ರಾಶಿ ಇಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಭಾರಿ ವೈರಲ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಜೂನ್ ತಿಂಗಳಲ್ಲಿ ಸ್ಲೋವಾಕಿಯಾ ಪ್ರವಾಸಕ್ಕೆ ತೆರಳಿದ್ದಾಗ ರಿಚರ್ಡ್ ಅವರಿಗೆ ಬಿಹಾರದ ಸಾಂಪ್ರದಾಯಿಕ ಸಿಹಿ ತಿಂಡಿಯಾದ ‘ಠೇಕುವಾ’ (Thekua) ಅನ್ನು ಉಡುಗೊರೆಯಾಗಿ ನೀಡಿದ್ದರು. ಆ ಸುಂದರ ಉಡುಗೊರೆಯ ಬಾಕ್ಸ್ ಅನ್ನು ಓಪನ್ ಮಾಡಿದ ರಿಚರ್ಡ್ ಆ ಸಿಹಿಯನ್ನು ಸವಿದು ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋ ಮೇಲಿದೆ ನೋಡಿ.
“ನರೇಂದ್ರ ಮೋದಿ ಸ್ಲೋವಾಕಿಯಾಗೆ ಭೇಟಿ ನೀಡಿದ್ದಾಗ, ನನಗೆ ಬಿಹಾರದ ಸಾಂಪ್ರದಾಯಿಕ ‘ಠೇಕುವಾ’ ಉಡುಗೊರೆಯಾಗಿ ನೀಡಿದ್ದರು. ಅದಕ್ಕೆ ಪ್ರತಿಯಾಗಿ ನಾನು ಅವರಿಗೆ ಹಿಂದಿ ಭಾಷೆಯಲ್ಲಿ ಬರಹಗಳನ್ನು ಕೆತ್ತಲಾದ ನಮ್ಮ ದೇಶದ ‘ಸ್ಲೋವಾಕ್ ಸ್ಪಾ ವೇಫರ್ಸ್’ (ಒಂದು ಬಗೆಯ ಬಿಸ್ಕತ್) ಅನ್ನು ಉಡುಗೊರೆಯಾಗಿ ನೀಡಿದ್ದೆ. ಇಂತಹ ಕ್ಷಣಗಳು ನಮ್ಮ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ” ಎಂದು ರಿಚರ್ಡ್ ಪೋಸ್ಟ್ ಮಾಡಿದ್ದಾರೆ.
ಠೇಕುವಾ ಎಂಬ ಸಿಹಿತಿಂಡಿಯನ್ನು ಬಿಹಾರ ಮತ್ತು ಉತ್ತರ ಭಾರತದ ಪ್ರಸಿದ್ಧ ಹಬ್ಬವಾದ ‘ಛತ್ ಪೂಜೆ’ಯ ಸಂದರ್ಭದಲ್ಲಿ ವಿಶೇಷವಾಗಿ ಪ್ರಸಾದದ ರೂಪದಲ್ಲಿ ತಯಾರಿಸಲಾಗುತ್ತದೆ. ಗೋಧಿ ಹಿಟ್ಟು, ಬೆಲ್ಲ ಅಥವಾ ಸಕ್ಕರೆ ಹಾಗೂ ತುಪ್ಪವನ್ನು ಬಳಸಿ ಇದನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇದರ ಮೇಲ್ಭಾಗದಲ್ಲಿ ವಿಶೇಷವಾದ ವಿನ್ಯಾಸಗಳ ಅಚ್ಚು ಇರುತ್ತದೆ. ಮೋದಿ ಅವರು ಬಿಹಾರದಿಂದ ತಂದಿದ್ದ ಈ ವಿಶಿಷ್ಟ ಸಿಹಿಯ ತುಂಡುಗಳನ್ನು ತಿಂದ ರಿಚರ್ಡ್ “ಇದು ನಮ್ಮ ಸ್ಲೋವಾಕಿಯಾ ದೇಶದ ಸಾಂಪ್ರದಾಯಿಕ ಸಿಹಿ ತಿಂಡಿಗಳನ್ನೇ ನೆನಪಿಸುತ್ತದೆ” ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

