SM Krishna: ಎಸ್ಎಂ ಕೃಷ್ಣ ಅಂತಿಮಯಾತ್ರೆ ವಾಹನದ ವಿಶೇಷವೇನು? ವಿಡಿಯೋ ನೋಡಿ
ಮಂಗಳವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಪಾರ್ಥಿವ ಶರೀರದ ಮೆರವಣಿಗೆ ಆರಂಭಗೊಂಡಿದೆ. ಎಸ್ಎಂ ಕೃಷ್ಣ ಅಂತಿಮಯಾತ್ರೆಗೆಂದು ವಿಶೇಷವಾಗಿ ವಾಹನವನ್ನು ಸಿದ್ಧಪಡಿಸಲಾಗಿದೆ. ಎಸ್ಎಂ ಕೃಷ್ಣ ಅಂತಿಮ ಯಾತ್ರೆಯ ವಾಹನದ ವಿಶೇಷವೇನು? ಯಾವ ರೀತಿಯ ಅಲಂಕಾರ ಮಾಡಲಾಗಿದೆ ಎಂಬಿತ್ಯಾದಿ ವಿವರಗಳು ಇಲ್ಲಿವೆ. ವಿಡಿಯೋ ನೋಡಿ.
ಮಾಜಿ ಸಿಎಂ ಎಸ್ಎಂ ಕೃಷ್ಣ ಪಾರ್ಥಿವ ಶರೀರದ ಅಂತಿಮ ಯಾತ್ರೆ ಬೆಂಗಳೂರಿನ ಸದಾಶಿವನಗರದಿಂದ ಆರಂಭವಾಗಿದ್ದು, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ವರೆಗೆ ಸಾಗಲಿದೆ. ಅಲ್ಲಿ ಕಾಫಿ ಡೇ ಆವರಣದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಲಿದೆ. ಎಸ್ಎಂ ಕೃಷ್ಣ ಅಂತಿಮಯಾತ್ರೆಗೆಂದು ವಿಶೇಷವಾಗಿ ವಾಹನವನ್ನು ಸಿದ್ಧಪಡಿಸಲಾಗಿದೆ. ಬಿಳಿ ಬಣ್ಣದ ಹೂ ಹಾಗೂ ತುಳಸಿ ಎಲೆಗಳಿಂದ ವಾಹನಕ್ಕೆ ಅಲಂಕಾರ ಮಾಡಲಾಗಿದೆ. ಗಾಜಿನಿಂದ ಕೂಡಿರುವ ಚಿರಶಾಂತಿ ವಾಹನದ ಮುಂಭಾಗದಲ್ಲಿ ಎಸ್ಎಂ ಕೃಷ್ಣ ಭಾವಚಿತ್ರ ಅಳವಡಿಸಲಾಗಿದೆ. ಸೇವಂತಿಗೆ, ತುಳಸಿ, ಗುಲಾಬಿ, ಮಿಕ್ಸ್ ಲೀವ್ಸ್, ಜಿಪ್ಸಿ ಹೂವಿನಿಂದ ಅಲಂಕಾರ ಮಾಡಲಾಗಿದೆ. ಅಂತಿಮಯಾತ್ರೆ ವಾಹನದ ವಿಶೇಷದ ಬಗ್ಗೆ ವಾಹನವನ್ನು ಅಲಂಕರಿಸಿದವರ ಜತೆ ‘ಟಿವಿ9’ ಪ್ರತಿನಿಧಿ ನಡೆಸಿರುವ ಸಂಭಾಷಣೆ ಇಲ್ಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos