Video: ಮೂತ್ರಪಿಂಡದ ಕಾಯಿಲೆಯ ವಿರುದ್ಧ ಹೋರಾಡುತ್ತಿರುವ ಪುಟ್ಟ ಬಾಲಕನ ಆಸೆ ಈಡೇರಿಸಿದ ಪೊಲೀಸರು

|

Updated on: Apr 30, 2024 | 4:13 PM

ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಸ್ಟೋನ್ ಹಿಕ್ಸ್ ನ ಪೋಷಕರು ಆತನಿಗೆ ಪೊಲೀಸ್​​ ಆಗುವ ಆಸೆಯಿದೆ. ಇದನ್ನು ಈಡೇರಿಸಿಕೊಡಿ ಎಂದು ಮನವಿ ಮಾಡಿದ್ದರು. ಒರ್ಲ್ಯಾಂಡೊ ಪೋಲಿಸ್ ಮತ್ತು ಮೇಕ್-ಎ-ವಿಶ್ ಫೌಂಡೇಶನ್ ಸಹಯೋಗದೊಂದಿಗೆ ಪುಟ್ಟ ಬಾಲಕನ ಆಸೆಯನ್ನು ಈಡೇರಿಸಿದೆ.

ಫ್ಲೋರಿಡಾ: ಮೂತ್ರಪಿಂಡದ ಕಾಯಿಲೆಯ ವಿರುದ್ಧ ಹೋರಾಡುತ್ತಿರುವ ಬಾಲಕ ಸ್ಟೋನ್ ಹಿಕ್ಸ್ (4 ವರ್ಷ) ಒಂದು ದಿನದ ಮಟ್ಟಿಗೆ ಪೊಲೀಸ್​ ಆಫೀಸರ್​ ಆಗಿದ್ದಾನೆ. ಕಾಯಿಲೆಯಿಂದಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಈ ಬಾಲಕ ಒರ್ಲ್ಯಾಂಡೊದಲ್ಲಿ ಪೊಲೀಸ್ ಅಧಿಕಾರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸುಂದರ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಫ್ಲೋರಿಡಾದ ಒರ್ಲ್ಯಾಂಡೊ ಪೊಲೀಸ್​ ಅಧಿಕಾರಿಗಳು ಪುಟ್ಟ ಬಾಲಕನ ಪೊಲೀಸ್​ ಆಗುವ ಆಸೆಯನ್ನು ಈಡೇರಿಸಿದ್ದು, ಸದ್ಯ ಇವರ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಸ್ಟೋನ್ ಹಿಕ್ಸ್ ನ ಪೋಷಕರು ಆತನಿಗೆ ಪೊಲೀಸ್​​ ಆಗುವ ಆಸೆಯಿದೆ. ಇದನ್ನು ಈಡೇರಿಸಿಕೊಡಿ ಎಂದು ಮನವಿ ಮಾಡಿದ್ದರು. ಒರ್ಲ್ಯಾಂಡೊ ಪೋಲಿಸ್ ಮತ್ತು ಮೇಕ್-ಎ-ವಿಶ್ ಫೌಂಡೇಶನ್ ಸಹಯೋಗದೊಂದಿಗೆ ಪುಟ್ಟ ಬಾಲಕನ ಆಸೆಯನ್ನು ಈಡೇರಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್​ಗೆ ಬಿಗ್ ಟ್ವಿಸ್ಟ್, ಸಂತ್ರಸ್ತೆಯ ಗಂಡನ ತಾಯಿ ಸ್ಫೋಟಕ ಹೇಳಿಕೆ