AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನನಿತ್ಯ ಸೋಡಾ ಮಿಶ್ರಿತ ಪಾನೀಯ ಸೇವಿಸುವ ಅಭ್ಯಾಸವಿದೆಯೇ, ಹಾಗಾದ್ರೆ ನೀವು ಮಾರಣಾಂತಿಕ ಮೂತ್ರಪಿಂಡದ ಕಾಯಿಲೆಗೆ ಆಹ್ವಾನ ಕೊಟ್ಟಂತೆ

ಬೇಸಿಗೆ ಕಾಲದಲ್ಲಿ ವಿಪರೀತ ಬಾಯಾರಿಕೆಯಿಂದ ತಂಪು ಪಾನೀಯಗಳ ಸೇವನೆಯತ್ತ ಒಲವು ತೋರಿಸುವವರು ಹೆಚ್ಚು. ನಮ್ಮ ಕೆಲವು ಅಭ್ಯಾಸಗಳಿಂದ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಈ ಸೋಡಾ ಮಿಶ್ರಿತ ತಂಪು ಪಾನೀಯಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತೊಂದರೆಯಾಗುವುದು ನಿಶ್ಚಿತ ಎನ್ನುವ ಅಚ್ಚರಿಕಾರಿ ವಿಚಾರವೊಂದು ಹೊರಬಿದ್ದಿದೆ. ಸಿಹಿಯಾದ ಕೃತಕ ಪಾನೀಯವನ್ನು ಸೇವಿಸುವುದರಿಂದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳ ಅಪಾಯವು ಹೆಚ್ಚು ಎನ್ನುವುದು ತಜ್ಞರು ನಡೆಸಿದ ಅಧ್ಯಯನದಿಂದ ಬಹಿರಂಗವಾಗಿದೆ.

ದಿನನಿತ್ಯ ಸೋಡಾ ಮಿಶ್ರಿತ ಪಾನೀಯ ಸೇವಿಸುವ ಅಭ್ಯಾಸವಿದೆಯೇ, ಹಾಗಾದ್ರೆ ನೀವು ಮಾರಣಾಂತಿಕ ಮೂತ್ರಪಿಂಡದ ಕಾಯಿಲೆಗೆ ಆಹ್ವಾನ ಕೊಟ್ಟಂತೆ
ಸಾಯಿನಂದಾ
| Edited By: |

Updated on: Feb 29, 2024 | 3:13 PM

Share

ಬಾಯಾರಿಕೆಯನ್ನು ನೀಗಿಸಲು ಈ ಸಿಹಿಯಾದ ಪಾನೀಯವನ್ನು ಕುಡಿಯುವುದರಿಂದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳ ಅಪಾಯವು ಹೆಚ್ಚು ಎನ್ನುವುದನ್ನು ಸಿಯೋಲ್‌ನ ಯೋನ್ಸೆ ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಸಿನ್‌ನ ತಜ್ಞರು ಸ್ಪಷ್ಟ ಪಡಿಸಿದ್ದಾರೆ. ಹೌದು, ಜಮಾ ನೆಟ್‌ವರ್ಕ್ ಓಪನ್‌ನಲ್ಲಿ ಪ್ರಕಟವಾದ ಮಾಹಿತಿಯಲ್ಲಿ, ಅಧ್ಯಯನದ ವೇಳೆ 127,830 ಹೆಚ್ಚು ವಿದೇಶಿಗರನ್ನು ಪರೀಕ್ಷೆಗೆ ಒಳಪಡಿಸಲಾಯಿತು ಎನ್ನಲಾಗಿದೆ. ಸಿಹಿಯಾದ ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದರಿಂದ ಆಗುವ ಅಪಾಯದ ಮಟ್ಟವನ್ನು ಕಂಡು ಹಿಡಿಯುವ ಸಲುವಾಗಿ ಒಂದು ದಿನದಲ್ಲಿ ಈ ತಂಪು ಪಾನೀಯಗಳನ್ನು ಎಷ್ಟು ಬಾರಿ ಸೇವಿಸಿದ್ದಾರೆ ಎಂದು ಪ್ರಶ್ನೆ ಕೇಳಲಾಯಿತು.

ಈ ಅಧ್ಯಯನ ಬಳಿಕ ಸರಾಸರಿ 10 ವರ್ಷಗಳಲ್ಲಿ 4,459 ಜನರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವುದು ಬಹಿರಂಗವಾಗಿದೆ. ಕೃತಕವಾದ ಈ ಸಿಹಿ ಪಾನೀಯಗಳನ್ನು ಸೇವಿಸುವುದರಿಂದ ರೋಗದಿಂದ ಬಳಲುತ್ತಿರುವ ಸಾಧ್ಯತೆಯು ಶೇಕಡಾ 10 ರಷ್ಟಿದೆ. ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಪಾನೀಯಗಳನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಯಿಂದ ಬಳಲುವ ಪ್ರಮಾಣವು ಶೇಕಡಾ 26 ರಷ್ಟು ಹೆಚ್ಚಾಗಬಹುದು ಎಂದು ದಕ್ಷಿಣ ಕೊರಿಯಾದ ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರಲ್ಲಿ ಋತುಬಂಧ ಸಮೀಪಿಸುತ್ತಿರುವ ಈ 7 ಚಿಹ್ನೆಗಳನ್ನು ನಿರ್ಲಕ್ಷ್ಯಿಸಬೇಡಿ!

ನಿತ್ಯವು ಈ ಫಿಜ್ಜಿ ಡ್ರಿಂಕ್ಸ್ ಕುಡಿಯುವುದರಿಂದ ಈ ಮಾರಣಾಂತಿಕ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಸಂಖ್ಯೆಯು ಐದನೇ ಒಂದು ಭಾಗದಷ್ಟು ಹೆಚ್ಚಾಗಬಹುದು. 10 ವರ್ಷಗಳವರೆಗೆ ಪ್ರತಿದಿನ ಒಂದು ಲೋಟ ಸೋಡಾ ಮಿಶ್ರಿತ ಪಾನೀಯವನ್ನು ಸೇವಿಸುವ ಜನರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುವ ಅಪಾಯವು ಹೆಚ್ಚಾಗಿರುತ್ತದೆ. ಆದರೆ ನೀರು ಅಥವಾ ಹಣ್ಣಿನ ರಸಗಳನ್ನು ಸೇವಿಸುವುದರಿಂದ ಈ ರೋಗಗಳ ಬೆಳವಣಿಗೆಯ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು ಎಂದಿದ್ದಾರೆ.

ನೈಸರ್ಗಿಕವಾಗಿ ತಯಾರಿಸಿದ ಹಣ್ಣಿನ ರಸವನ್ನು ಸೇವಿಸುವುದರಿಂದ ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯು ಬರುವ ಸಾಧ್ಯತೆಯು ಕಡಿಮೆ ಎನ್ನಲಾಗಿದೆ. ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಈ ರೋಗದ ಅಪಾಯದ ವಿರುದ್ಧ ಹೋರಾಡಲು ಒಂದು ಸಾಧನವಾಗಿದೆ. ಹೀಗಾಗಿ ಮೂತ್ರಪಿಂಡವನ್ನು ರಕ್ಷಿಸಲು ಹಣ್ಣಿನ ರಸಗಳನ್ನು ಸೇವಿಸುವುದು ಒಳ್ಳೆಯ ಅಭ್ಯಾಸ ಎಂದು ಸಲಹೆಯನ್ನು ನೀಡಿದ್ದಾರೆ. ಒಂದು ವೇಳೆ ಮೂತ್ರಪಿಂಡ ಕಾಯಿಲೆಯು ಗಂಭೀರವಾದ ಬಳಿಕ ಕಾಣುವ ರೋಗಲಕ್ಷಣಗಳನ್ನು ನಿರ್ವಹಿಸುವುದು ಕಷ್ಟಕರವಾಗಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ