ರಾಮನಗರದಲ್ಲಿ ಪುಡಿರೌಡಿಗಳು ಮಚ್ಚುಗಳನ್ನು ಹಿಡಿದು ಓಡಾಡುತ್ತಿದ್ದಾರೆ!

Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 15, 2022 | 6:06 PM

ಒಂದು ಗುಂಪಿನ ಸದಸ್ಯ ಹರಿತವಾದ ಆಯುಧವನ್ನು (sharp weapon) ತನ್ನ ಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದು ಮತ್ತು ಅವನು ಅದನ್ನು ಹೊರಗೆ ತೆಗೆಯುತ್ತಲೇ ಎದುರಾಳಿ ಗುಂಪಿನ ಸದಸ್ಯರು ಬಿದ್ದೆನೋ ಸತ್ತೆನೋ ಅಂತ ಓಟಕಿತ್ತುವುದು ಕೆಮೆರಾದಲ್ಲಿ ಸೆರೆಯಾಗಿದೆ.

ರಾಮನಗರದಲ್ಲಿ ಎರಡು ಗುಂಪುಗಳ ನಡುವೆ ಸುಮಾರು ಎರಡು ತಿಂಗಳು ಹಿಂದೆ ಕ್ಷುಲ್ಲಕ ಕಾರಣಕ್ಕೆ ನಡೆದ ಕಲಹವೊಂದು ಸಿಸಿಟಿವಿ (CCTV) ಸೆರೆಯಾಗಿದೆ. ಹಾಗೆ ನೋಡಿದರೆ ಗುಂಪುಗಳ ನಡುವೆ ಹೊಡೆದಾಟ ಬಡಿದಾಟವೇನೂ ನಡೆಯುತ್ತಿಲ್ಲ. ಆದರೆ, ಒಂದು ಗುಂಪಿನ ಸದಸ್ಯ ಹರಿತವಾದ ಆಯುಧವನ್ನು (sharp weapon) ತನ್ನ ಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದು ಮತ್ತು ಅವನು ಅದನ್ನು ಹೊರಗೆ ತೆಗೆಯುತ್ತಲೇ ಎದುರಾಳಿ ಗುಂಪಿನ ಸದಸ್ಯರು ಬಿದ್ದೆನೋ ಸತ್ತೆನೋ ಅಂತ ಓಟಕಿತ್ತುವುದು ಕೆಮೆರಾದಲ್ಲಿ ಸೆರೆಯಾಗಿದೆ.